ADVERTISEMENT

ಅರಸೀಕೆರೆ ಗಂಗಾಮತಸ್ಥರ ಸಮಾಜ ಅಧ್ಯಕ್ಷರಾಗಿ ಲಕ್ಷ್ಮಣ್ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 7:08 IST
Last Updated 12 ಆಗಸ್ಟ್ 2025, 7:08 IST
ಅರಸೀಕೆರೆ ತಾಲ್ಲೂಕಿನ ಗಂಗಾಮತಸ್ಥರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಲಕ್ಷಣ್‌ ಅವರನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿನಂದಿಸಿದರು 
ಅರಸೀಕೆರೆ ತಾಲ್ಲೂಕಿನ ಗಂಗಾಮತಸ್ಥರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಿ.ಲಕ್ಷಣ್‌ ಅವರನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿನಂದಿಸಿದರು    

ಅರಸೀಕೆರೆ: ತಾಲ್ಲೂಕು ಗಂಗಾಮತಸ್ಥರ ಸಮಾಜ ಸಂಘದ ವತಿಯಿಂದ ಭಾನುವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಡಿ .ಲಕ್ಷ್ಮಣ್ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಜಾವಗಲ್ ರವಿಕುಮಾರ್, ಕಾರ್ಯದರ್ಶಿಯಾಗಿ ಸತೀಶ್ ಕಣಕಟ್ಟೆ, ಖಂಜಾಚಿಯಾಗಿ ಬೆಲ್ಲದ ಪುಟ್ಟಸ್ವಾಮಿ ಸಂಘಟನಾ ಕಾರ್ಯದರ್ಶಿಯಾಗಿ ಜಾಜೂರು ಸಿದ್ದೇಶ್ ಹಾಗೂ ಇತರ 13 ಜನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.

ಶಾಸಕ ಕೆ.ಎಂ.ಶಿವಲಿಂಗೇಗೌಡ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ನೂತನ ಅಧ್ಯಕ್ಷ ಡಿ.ಲಕ್ಷ್ಮಣ್ ಮಾತನಾಡಿ ತಾಲೂಕಿನಲ್ಲಿ ಗಂಗಾಮತಸ್ಥ ಸಮಾಜವನ್ನು ಉತ್ತಮ ಸಂಘಟನೆಯೊಂದಿಗೆ ಒಗ್ಗೂಡಿಸಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸುಧಾರಣೆಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.