ADVERTISEMENT

ಜ್ಞಾನದ ಬೆಳಕು ಹರಿಯಲಿ- ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 16:24 IST
Last Updated 30 ಮಾರ್ಚ್ 2022, 16:24 IST
ಚಿತ್ರಕಲಾವಿದ ಬಿ.ಎಸ್.ದೇಸಾಯಿ ಅವರು ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನವನ್ನು ಶಂಭುನಾಥ ಸ್ವಾಮೀಜಿ, ಹಂಪನಹಳ್ಳಿ ತಿಮ್ಮೇಗೌಡ ವೀಕ್ಷಿಸಿದರು
ಚಿತ್ರಕಲಾವಿದ ಬಿ.ಎಸ್.ದೇಸಾಯಿ ಅವರು ಏರ್ಪಡಿಸಿದ್ದ ಚಿತ್ರಕಲಾ ಪ್ರದರ್ಶನವನ್ನು ಶಂಭುನಾಥ ಸ್ವಾಮೀಜಿ, ಹಂಪನಹಳ್ಳಿ ತಿಮ್ಮೇಗೌಡ ವೀಕ್ಷಿಸಿದರು   

ಚನ್ನವೀರಕಣವಿ ವೇದಿಕೆ: ‘ದೇಶ ಶ್ರೀಮಂತವಾಗಬೇಕಾದರೆ ಆ ದೇಶದ ಸಾಹಿತ್ಯ ಸಮೃದ್ಧವಾಗಿರಬೇಕು’ ಎಂದು ಆದಿಚುಂಚನಗಿರಿ ಶಾಖಾ ಮಠದಶಂಭುನಾಥ ಸ್ವಾಮೀಜಿ ಹೇಳಿದರು.

ಜಿಲ್ಲಾ 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದಅವರು, ‘ಪುಸ್ತಕ ಬರೆದವರು ಮಾತ್ರ ಸಾಹಿತಿಗಳಲ್ಲ. ನಾಡಿಗೆ, ರಾಷ್ಟ್ರಕ್ಕೆಹಿತ ಬಯಸುತ್ತಾರೋ ಅವರೆಲ್ಲರೂ ಸಾಹಿತಿಗಳೇ’ ಎಂದು ನುಡಿದರು.

‘ಹಳ್ಳಿಯಲ್ಲಿ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ವಿಷಯ. ಅಜ್ಞಾನದೂರವಾಗಿ ಜ್ಞಾನದ ಬೆಳಕು ಹರಿಯಬೇಕು. ಪುಸ್ತಕ ಓದಿ ಚಿಂತಕರಾಗಿ,ಮಕ್ಕಳಿಗೆ ಜ್ಞಾನ ಹಂಚಬೇಕು’ ಎಂದರು. ‌

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್ಮಾತನಾಡಿ, ‘ಆಂಗ್ಲಭಾಷೆಯ ವ್ಯಾಮೋಹದಿಂದ ಕನ್ನಡ ಭಾಷೆಯ ಬಳಕೆ ಕಡಿಮೆ ಆಗುತ್ತಿದೆ. ಕನ್ನಡದಲ್ಲಿ ಮಾತನಾಡಿದರೆ ಜನ ನಮ್ಮನ್ನು ಗೌರವಿಸುವುದಿಲ್ಲಎಂಬ ಕೀಳರಿಮೆಯಿಂದ ಹೊರಬರಬೇಕು. ಇಲ್ಲದಿದ್ದರೆ ಭಾಷೆ, ಸಂಸ್ಕೃತಿಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ.ಕೃಷ್ಣೇಗೌಡ, ಶಿಕ್ಷಕನಾಯಕರಹಳ್ಳಿ ಮಂಜೇಗೌಡ, ರಾಜ್ಯ ಮಾರಾಟ ಮಹಾಮಂಡಳ ಅಧ್ಯಕ್ಷಸಿ.ಎನ್.ಪುಟ್ಟಸ್ವಾಮಿ, ಮುಖಂಡ ಸ್ವಾಮಿಗೌಡ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿನೋದ್‌ ಚಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸಿ.ಕೆ.ಹರೀಶ್‌, ಕನ್ನಡ ಮತ್ತು ಸಂಸ್ಕೃತಿಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್‌, ಕುವೆಂಪು ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವರಾಮೇಗೌಡ, ಪತ್ರಕರ್ತ ಎಸ್‌.ಆರ್.ಪ್ರಸನ್ನ, ಧರ್ಮಸ್ಥಳಗ್ರಾಮಾಭಿವೃದ್ಧಿ ಸಂಸ್ಥೆಯ ಜಯರಾಂ ಇದ್ದರು.

ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ ಸ್ವಾಗತಿಸಿದರು. ಉಪನ್ಯಾಸಕಎಚ್‌.ಕೆ.ಲಕ್ಷ್ಮೀನಾರಾಯಣ ನಿರೂಪಿಸಿದರು. ಬನುಮ್‌ ಗುರುದತ್‌,ಬಿ.ಡಿ.ಶಂಕರೇಗೌಡ ಮತ್ತು ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.