ADVERTISEMENT

ಎಸ್ಟಿ ಮೀಸಲಾತಿಯಿಂದ ಸಾಕಷ್ಟು ಲಾಭ

ಫೆ. 7ರ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 14:14 IST
Last Updated 29 ಜನವರಿ 2021, 14:14 IST
ಹಾಸನದ ಕನಕ ಭವನದಲ್ಲಿ ನಡೆದ ಕುರುಬ ಎಸ್ಟಿ ಮೀಸಲಾತಿ ಸಮಾವೇಶದ ಪೂರ್ವಭಾವಿಸಭೆಯಲ್ಲಿ ಪಾಲ್ಗೊಂಡಿದ್ದ ಜನಸಮೂಹ.
ಹಾಸನದ ಕನಕ ಭವನದಲ್ಲಿ ನಡೆದ ಕುರುಬ ಎಸ್ಟಿ ಮೀಸಲಾತಿ ಸಮಾವೇಶದ ಪೂರ್ವಭಾವಿಸಭೆಯಲ್ಲಿ ಪಾಲ್ಗೊಂಡಿದ್ದ ಜನಸಮೂಹ.   

ಹಾಸನ: ಫೆ.7ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶಕ್ಕೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸುವ ಮೂಲಕ ಹೋರಾಟಕ್ಕೆ ಬಂಬಲ ನೀಡಬೇಕು ಎಂದು ಕುರುಬ ಎಸ್ಟಿ ಮೀಸಲಾತಿಹೋರಾಟ ಸಮಿತಿ ರಾಜ್ಯಾಧ್ಯಕ್ಷ ವಿರೂಪಾಕ್ಷಪ್ಪ ಹೇಳಿದರು.

ನಗರದ ಕನಕ ಭವನದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದ ಆಶ್ರಯದಲ್ಲಿ ಶುಕ್ರವಾರ ಕರೆದಿದ್ದ ಕುರುಬ ಎಸ್ಟಿಮೀಸಲಿಗಾಗಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಸ್ವಾತಂತ್ರ‍್ಯ ಬಂದ ನಂತರ ಕುರುಬ ಸಮುದಾಯಕ್ಕೆ ಸೌಲಭ್ಯಗಳೇ ಸಿಕ್ಕಿಲ್ಲ. ಆ ಕಾರಣದಿಂದಲೇ ಈಹೋರಾಟ ಆರಂಭಿಸಲಾಗಿದೆ. ಕಾಡುಕುರುಬ, ಜೇನು ಕುರುಬ, ಗೋಂಡಾ ಈ ಎಲ್ಲವೂ ಎಸ್ಟಿಗೆಸೇರ್ಪಡೆಯಾಗಿದೆ. ಆದರೆ, ಕುರುಬ ಸಮುದಾಯವನ್ನು ಸೇರಿಸಿಲ್ಲ. ಹೋರಾಟ ಯಾವುದೇ ಪಕ್ಷಅಥವಾ ವ್ಯಕ್ತಿಯ ಪರ–ವಿರೋಧ ಅಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ಕುರುಬ ಸಮುದಾಯ ಈಗಾಗಲೇ 2 ಎ ವರ್ಗಕ್ಕೆ ಸೇರಿದೆ. ಇದರಲ್ಲಿ ಶೇಕಡಾ 15 ರಷ್ಟು ಮೀಸಲಾತಿಇದ್ದು, 150 ಜಾತಿಗಳು ಸೇರಿವೆ. ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಇಲ್ಲ. ಎಸ್ಟಿಗೆಸೇರ್ಪಡೆಯಾದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಅವಕಾಶ ಸಿಗಲಿದೆ. ರಾಜ್ಯದಲ್ಲಿ ಕನಿಷ್ಟ 15ರಿಂದ 20 ಮಂದಿಶಾಸಕರಾಗುವ ಅವಕಾಶವಿದೆ. ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿಯೂ ಅನುಕೂಲ ಆಗಲಿದೆ ಎಂದುಮಾಹಿತಿ ನೀಡಿದರು.

ಹೋರಾಟ ಫೆ. 7ಕ್ಕೆ ಕೊನೆಗೊಳ್ಳುವುದಿಲ್ಲ. ಕಾಗಿನೆಲೆ ಕನಕ ಗುರು ಪೀಠದ ನಿರಂಜನಾಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಬೇಡಿಕೆ ಈಡೆರುವವರೆಗೂ ಮುಂದುವರೆಯಲಿದೆ ಎಂದು ತಿಳಿಸಿದರು.

ಮಾಜಿ ಸಚಿವ ಎಚ್‌.ಎಂ ರೇವಣ್ಣ, ಕೆ.ಎಸ್‌. ಈಶ್ವರಪ್ಪ ಅವರ ಪುತ್ರ ಕಾಂತೇಶ್‌, ಕುರುಬ ಎಸ್ಟಿಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ದೊಡ್ಡಯ್ಯ, ಉಪಾಧ್ಯಕ್ಷ ಪುಟ್ಟಸ್ವಾಮಿ, ಕಾರ್ಯಾಧ್ಯಕ್ಷಕುರುಬರ ಮುಕಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.