ಚನ್ನರಾಯಪಟ್ಟಣ: ಹಸೆಮಣೆ ಏರಿದ ನೂತನ ದಂಪತಿ ಭಾನುವಾರ ಪೊಲೀಸರಿಗೆ ಮದುವೆಯ ಊಟ ನೀಡಿದರು.
ತಾಲ್ಲೂಕಿನ ಗದ್ದೆಬಿಂಡೇನಹಳ್ಳಿ ಗ್ರಾಮದ ರಮ್ಯಾ, ಹಾಸನ ತಾಲ್ಲೂಕು ಅಂಕಪುರ ಗ್ರಾಮದ ಸಂದೇಶ ಅವರ ವಿವಾಹ ಸಮಾರಂಭ ವಧುವಿನ ಊರಿನಲ್ಲಿ ನಡೆಯಿತು. ಲಾಕ್‌ಡೌನ್ ಇರುವುದರಿಂದ ವಿವಾಹ ಸಮಾರಂಭ ಸರಳವಾಗಿ ನೆರವೇರಿತು. ಬಳಿಕ ದಂಪತಿ ಪೊಲೀಸ್ ಠಾಣೆಗೆ ತೆರಳಿ ವಿವಾಹದ ನಿಮಿತ್ತ ತಯಾರಿಸಿದ ಅಡುಗೆಯನ್ನು ಪೊಲೀಸರಿಗೆ ಉಣ ಬಡಿಸಿದರು.
ಕೊರಾನಾ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.