ADVERTISEMENT

ಮಲೆನಾಡಿನಲ್ಲಿ ಮಳೆ–ಗಾಳಿ ಅಬ್ಬರ: ಮರಗಳು ರಸ್ತೆಗೆ ಉರುಳಿ ವಾಹನ ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 5:49 IST
Last Updated 28 ಜುಲೈ 2025, 5:49 IST
ಯಸಳೂರು ಹೋಬಳಿಯ ಕುಂಬ್ರಹಳ್ಳಿ ಸಮೀಪದ ರಸ್ತೆ ಮೇಲೆ‌ ಮರ ಬಿದ್ದಿರುವುದು
ಯಸಳೂರು ಹೋಬಳಿಯ ಕುಂಬ್ರಹಳ್ಳಿ ಸಮೀಪದ ರಸ್ತೆ ಮೇಲೆ‌ ಮರ ಬಿದ್ದಿರುವುದು   

ಹೆತ್ತೂರು: ಮಲೆನಾಡು ಹೆತ್ತೂರು, ಯಸಳೂರು ಹೋಬಳಿಯಲ್ಲಿ ಕೆಲಕಾಲ ತುಂತುರು ಹಾಗೂ ಕೆಲಕಾಲ ಜಡಿ ಮಳೆ ಸುರಿಯುತ್ತಿದೆ. ಮಳೆಗಿಂತಲೂ ಗಾಳಿಯ ಆರ್ಭಟ ಬಿರುಸಾಗಿದ್ದರಿಂದ ಕೆಲವು ಕಡೆ ಮರಗಳು ರಸ್ತೆಗೆ ಉರುಳಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಹೇಮಾವತಿ ಉಪನದಿ ನೀರಿನ ಹರಿವು ಏರಿಕೆ ಕಂಡಿದ್ದು, ಯಡಕೇರಿ- ಕಲ್ಲೂರು ಸೇತುವೆ, ಬಾಣಗೇರಿ, ಮಾಗೇರಿ ರಸ್ತೆ ಮೇಲೆ ನೀರು ಹರಿದಿದೆ.

ಭಾರಿ ಗಾಳಿಯಿಂದಾಗಿ ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು, ಗಾಳಿಯಿಂದ ಮನೆಗಳಿಗೆ ಹಾಕಲಾಗಿದ್ದ ಟಾರ್ಪಲ್, ಮನೆಗಳ ಚಾವಣಿಯ ಹೆಂಚುಗಳು ಹಾರಿ ಹೋಗಿವೆ. ಮಳೆಯಿಂದಾಗಿ ಮನೆಗಳಿಗೆ ತೇವಾಂಶ ಹೆಚ್ಚಾಗಿ ಹಲವು ಮನೆಗಳ ಗೋಡೆಗಳು ಕುಸಿದಿವೆ.

ADVERTISEMENT

ಮಲೆನಾಡು ಭಾಗಕ್ಕೆ ಮಳೆಯ ಮೋಜು ಸವಿಯಲು ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. 24 ಗಂಟೆಗಳಲ್ಲಿ ಹೋಬಳಿಯ ಹಂಡಳಿ ಕೊಡಿಗೆ ಗ್ರಾಮದಲ್ಲಿ 26.3 ಸೆಂ.ಮೀ. ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.