ADVERTISEMENT

ಗಾಂಧೀಜಿ ಜೀವನ ಮೌಲ್ಯ ಸಾರ್ವಕಾಲಿಕ ಸತ್ಯ : ಎಂ.ಜಿ.ಸಂತೋಷ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 5:42 IST
Last Updated 31 ಜನವರಿ 2026, 5:42 IST
ಅರಸೀಕೆರೆ ನಗರದ ಕಸ್ತೂರಬಾ ಶಿಬಿರದಲ್ಲಿ ಗಾಂಧೀಜಿ ಪ್ರತಿಮೆ ಎದುರು ಹುತಾತ್ಮ ದಿನಾಚರಣೆ ಆಚರಿಸಲಾಯಿತು.
ಅರಸೀಕೆರೆ ನಗರದ ಕಸ್ತೂರಬಾ ಶಿಬಿರದಲ್ಲಿ ಗಾಂಧೀಜಿ ಪ್ರತಿಮೆ ಎದುರು ಹುತಾತ್ಮ ದಿನಾಚರಣೆ ಆಚರಿಸಲಾಯಿತು.   

ಅರಸೀಕೆರೆ: ‘ಗಾಂಧೀಜಿಯವರ ಜೀವನದ ಮೌಲ್ಯಗಳು ಇಂದಿಗೂ ಸಾರ್ವಕಾಲಿಕ ಸತ್ಯ. ಅವರ ಜೀವನವನ್ನು ಅರಿತರೆ ನಾವು ನಮ್ಮ ಬದುಕನ್ನು ಅರ್ಥಪೂರ್ಣವಾಗಿ ರೂಪಿಸಿಕೊಳ್ಳಬಹುದು’ ಎಂದು ತಹಶೀಲ್ದಾರ್‌ ಎಂ.ಜಿ.ಸಂತೋಷ್‌ಕುಮಾರ್‌ ಹೇಳಿದರು.

ನಗರದ ಕಸ್ತೂರಬಾ ಟ್ರಸ್ಟ್‌ನಲ್ಲಿ ಶುಕ್ರವಾರ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ದೇಶದ ರಕ್ಷಣೆಯಲ್ಲಿ ಅದೆಷ್ಟೋ ಸೈನಿಕರು ಪ್ರಾಣ ತೆತ್ತಿದ್ದಾರೆ. ಅವರನ್ನು ಸ್ಮರಣೆ ಮಾಡಿ ಗೌರವಿಸುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ’ ಎಂದರು.

ADVERTISEMENT

ಅನಂತ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಆರ್.ಅನಂತಕುಮಾರ್ ಮಾತನಾಡಿ, ‘ಸ್ವಾತಂತ್ರ್ಯಕ್ಕಾಗಿ ವೀರ ಮರಣ ಹೊಂದಿದವರ ಇತಿಹಾಸವನ್ನು ಮುಂದಿನ ಮಕ್ಕಳಿಗೆ ಪರಿಚಯಿಸುವುದು ಅತ್ಯಗತ್ಯ’ ಎಂದರು. 

ಹುತಾತ್ಮರಾದ ಮಹಾತ್ಮರ ಗೌರವಾರ್ಥ 3 ನಿಮಿಷಗಳ ಮೌನ ಆಚರಿಸಲಾಯಿತು. ಹಾಸನ ಜಿಲ್ಲಾ ಅಸಿಸ್ಟೆಂಟ್ ಕಮೀಷನರ್ ಜಗದೀಶ್, ಆಶ್ರಮದ ಪ್ರತಿನಿಧಿಗಳು ಮತ್ತು ಉಪಪ್ರತಿನಿಧಿಗಳು, ಅನಂತ್ ಸದ್ವಿದ್ಯಾ ಬಿ.ಇಡಿ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

ಅರಸೀಕೆರೆ ನಗರದ ಕಸ್ತೂರಬಾ ಶಿಬಿರದಲ್ಲಿ ಗಾಂಧೀಜಿ ಪ್ರತಿಮೆ ಎದುರು ಹುತಾತ್ಮ ದಿನಾಚರಣೆ ಆಚರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.