ADVERTISEMENT

‘ಎಕ್ಸಾಂ ಮಾಸ್ಟರ್‌ ಮೈಂಡ್‌’ ಭಿತ್ತಿಪತ್ರ ಬಿಡುಗಡೆ ಮಾಡಿದ ಡಿವೈಎಸ್‌ಪಿ

ಡಿವೈಎಸ್‌ಪಿ ಜಿ.ಬಿ.ಲಕ್ಷ್ಮೇಗೌಡ ಅವರಿಂದ ‘ಎಕ್ಸಾಂ ಮಾಸ್ಟರ್‌ ಮೈಂಡ್‌’ ಭಿತ್ತಿಪತ್ರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 14:43 IST
Last Updated 23 ಆಗಸ್ಟ್ 2021, 14:43 IST
ಹೊಳೆನರಸೀಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್‌ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಹೊರ ತರುತ್ತಿರುವ ಇ ಪೇಪರ್ ಮಾಸ್ಟರ್ ಮೈಂಡ್‌ ಭಿತ್ತಿಪತ್ರವನ್ನು ಸಾಮಾಜಿಕ ಕಾರ್ಯಕರ್ತ ಎನ್.ಆರ್‌.ಅನಂತ ಕುಮಾರ್‌, ಡಿವೈಎಸ್‌ಪಿ ಲಕ್ಷ್ಮೇಗೌಡ ಬಿಡುಗಡೆ ಮಾಡಿದರು. ಪ್ರಜಾವಾಣಿ ಮೈಸೂರು ಬ್ಯುರೋ ಮುಖ್ಯಸ್ಥ ಕೆ. ನರಸಿಂಹಮೂರ್ತಿ, ಪ್ರಸರಣ ವಿಭಾಗದ ಎಜಿಎಂ ಜಗನ್ನಾಥ್‌ ಜೋಯಿಸ್‌, ಪ್ರಧಾನ ವ್ಯವಸ್ಥಾಪಕ ಆಲಿವರ್ ವೆಸ್ಲಿ, ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌, ಕಾಲೇಜಿನ ಪ್ರಾಂಶುಪಾಲ ದಿನೇಶ್ ಇದ್ದರು.
ಹೊಳೆನರಸೀಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್‌ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಹೊರ ತರುತ್ತಿರುವ ಇ ಪೇಪರ್ ಮಾಸ್ಟರ್ ಮೈಂಡ್‌ ಭಿತ್ತಿಪತ್ರವನ್ನು ಸಾಮಾಜಿಕ ಕಾರ್ಯಕರ್ತ ಎನ್.ಆರ್‌.ಅನಂತ ಕುಮಾರ್‌, ಡಿವೈಎಸ್‌ಪಿ ಲಕ್ಷ್ಮೇಗೌಡ ಬಿಡುಗಡೆ ಮಾಡಿದರು. ಪ್ರಜಾವಾಣಿ ಮೈಸೂರು ಬ್ಯುರೋ ಮುಖ್ಯಸ್ಥ ಕೆ. ನರಸಿಂಹಮೂರ್ತಿ, ಪ್ರಸರಣ ವಿಭಾಗದ ಎಜಿಎಂ ಜಗನ್ನಾಥ್‌ ಜೋಯಿಸ್‌, ಪ್ರಧಾನ ವ್ಯವಸ್ಥಾಪಕ ಆಲಿವರ್ ವೆಸ್ಲಿ, ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌, ಕಾಲೇಜಿನ ಪ್ರಾಂಶುಪಾಲ ದಿನೇಶ್ ಇದ್ದರು.   

ಹೊಳೆನರಸೀಪುರ: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ಹೊರ ತರುತ್ತಿರುವ ಇ ಪೇಪರ್‌ ‘ಎಕ್ಸಾಂ ಮಾಸ್ಟರ್‌ ಮೈಂಡ್‌’ ಸಹಕಾರಿಯಾಗಲಿದೆ ಎಂದು ಡಿವೈಎಸ್‌ಪಿಜಿ.ಬಿ.ಲಕ್ಷ್ಮೇಗೌಡ ಹೇಳಿದರು.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ ಪತ್ರಿಕೆಯ ‘ಎಕ್ಸಾಂ ಮಾಸ್ಟರ್‌ ಮೈಂಡ್‌’ ಭಿತ್ತಿ ಪತ್ರ ಬಿಡುಗಡೆಮಾಡಿ ಮಾತನಾಡಿದರು.

‘ನನ್ನ ಮತ್ತು ಪ್ರಜಾವಾಣಿ ಪತ್ರಿಕೆ ಬಾಂಧವ್ಯ ಐದು ದಶಕಗಳದ್ದು. ಬಾಲ್ಯದಿಂದಲೇ ಪತ್ರಿಕೆ ಓದಿಕೊಂಡುಬೆಳೆದಿದ್ದೇನೆ. ಇಂದಿಗೂ ಪತ್ರಿಕೆ ಜತೆಯಲ್ಲೇ ಬೆಳಿಗ್ಗೆ ಆರಂಭವಾಗುತ್ತದೆ. ಪತ್ರಿಕೆ ಓದುತ್ತಲೇ ಸ್ಪರ್ಧಾತ್ಮಕಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೆ. ಅಷ್ಟರ ಮಟ್ಟಿಗೆ ಅವಿನಾಭಾವ ಸಂಬಂಧವಿದೆ’ ಎಂದು ನೆನಪು ಮಾಡಿಕೊಂಡರು.

ADVERTISEMENT

‘ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ಸಂದರ್ಶನದಲ್ಲಿ ಡಿಜಿಪಿ ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದೆ. ಅಂದು ಪ್ರಜಾವಾಣಿ ಓದಿಕೊಂಡು ಹೋಗಿದ್ದ ಕಾರಣ ಸರಿಯಾದ ಉತ್ತರ ನೀಡಿದೆ. ಪತ್ರಿಕೆ ಓದುವಾಗ ಪ್ರಮುಖ ವಿಷಯಗಳ ಬಗ್ಗೆ ಟಿಪ್ಪಣಿ ಮಾಡಿಕೊಳ್ಳುವುದರ ಜತೆಗೆ ಲೇಖನಗಳನ್ನು ಸಂಗ್ರಹ ಮಾಡುತ್ತಿದ್ದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು’ ಎಂದು ನುಡಿದರು.

ಪ್ರಚಲಿತ ವಿದ್ಯಾಮಾನ, ಕ್ರೀಡೆ, ಶಿಕ್ಷಣ, ಸಾಮಾನ್ಯ ಜ್ಞಾನ ಸೇರಿದಂತೆ ಹಲವು ವಿಷಯಗಳಿಗೆ‘ಪ್ರಜಾವಾಣಿ’ಯಲ್ಲಿ ಆದ್ಯತೆ ನೀಡಲಾತ್ತಿದೆ. ಯಾವುದೇ ವಿಷಯದಲ್ಲೂ ರಾಜೀ ಮಾಡಿಕೊಳ್ಳುವುದಿಲ್ಲ.ವಾಚಕರವಾಣಿಯನ್ನು ನಿತ್ಯ ಓದಲೇಬೇಕು. ಸಮಾಜದಲ್ಲಿ ಖುಣ ತೀರಿಸಬೇಕಾದರೆ ಜೀವನದಲ್ಲಿ ಯಶಸ್ಸುಸಾಧಿಸಬೇಕು. ಜೀವನದಲ್ಲಿ ಗುರಿ ಸಾಧನೆಗೆ ಮಾಸ್ಟರ್ ಮೈಂಡ್‌ ಸಹಕಾರಿ ಆಗಲಿದೆ. ಕೆಲಸದ ಒತ್ತಡದನಡುವೆಯೂ ನಿತ್ಯ ಪ್ರಜಾವಾಣಿ ಪತ್ರಿಕೆ ಓದುವುದನ್ನು ತಪ್ಪಿಸಿಲ್ಲ ಎಂದು ತಿಳಿಸಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್‌ ಮಾತನಾಡಿ, ಏಳು ದಶಕದಿಂದಪ್ರಜಾವಾಣಿ ಪತ್ರಿಕೆ ಸಕಾರಾತ್ಮಕ ಸುದ್ದಿಗಳನ್ನು ಪ್ರಕಟಿಸುತ್ತಿದೆ. ಯಾವ ಪರೀಕ್ಷೆಗೂ 18 ತಾಸುಓದುವ ಅವಶ್ಯಕತೆ ಇಲ್ಲ. ಓದುವುದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಹಲವು ಕಥೆಗಳ ಉದಾಹರಣೆಗಳ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ‘ಎಕ್ಸಾಂ ಮಾಸ್ಟರ್ಮೈಂಡ್‌’ ಯಾವ ರೀತಿ ಸದುಪಯೋಗಕ್ಕೆ ಬರಲಿದೆ ಎಂಬುದನ್ನು ವಿವರಿಸಿದರು.

ಸಾಮಾಜಿಕ ಕಾರ್ಯಕರ್ತ ಎನ್‌.ಆರ್.ಅನಂತ ಕುಮಾರ್ ಮಾತನಾಡಿ, ತಾಲ್ಲೂಕಿನ ಸರ್ಕಾರಿ ಕಾಲೇಜುವಿದ್ಯಾರ್ಥಿಗಳು ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉನ್ನತ ಹುದ್ದೇಗೇರಬೇಕು.ಅದಕ್ಕಾಗಿ ಸಾವಿರ ವಿದ್ಯಾರ್ಥಿಗಳಿಗೆ ಮಾಸ್ಟರ್‌ ಮೈಂಡ್‌ ಪ್ರಾಯೋಜಕತ್ವ ನೀಡಿದ್ದೇನೆ. ದೊರೆತ ಅವಕಾಶಸದುಪಯೋಗ ಪಡಿಸಿಕೊಂಡು ತಂದೆ,ತಾಯಿ, ಓದಿದ ಶಾಲೆಗೆ ಕೀರ್ತಿ ತರಬೇಕು ಎಂದು ಕಿವಿಮಾತುಹೇಳಿದರು.

ಕಾಲೇಜಿನ ಪ್ರಾಂಶುಪಾಲ ದಿನೇಶ್ ಕುಮಾರ್ ಮತ್ತು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕವೀರಭದ್ರಯ್ಯ ಮಾತನಾಡಿ, ಪ್ರಜಾವಾಣಿ ಇ ಪೇಪರ್‌ ಮಾಸ್ಟರ್‌ ಮೈಂಡ್‌ ಸ್ಪರ್ಧಾತ್ಮಕ ಪರೀಕ್ಷೆಎದುರಿಸುವವರಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವಂತೆಕರೆ ನೀಡಿದರು.

ಪ್ರಸರಣ ವಿಭಾಗದ ಎಜಿಎಂ ಜಗನ್ನಾಥ್‌ ಜೋಯಿಸ್ ಮಾತನಾಡಿ, ಯುವ ಸಮುದಾಯವನ್ನು ಗಮನದಲ್ಲಿ ಇಟ್ಟುಕೊಂಡು ಮಾಸ್ಟರ್‌ ಮೈಂಡ್‌ ಇ ಪೇಪರ್‌ ಹೊರ ತರಲಾಗುತ್ತಿದೆ. ವಿದ್ಯಾರ್ಥಿಗಳ ಮುಂದಿನ ಭವಿಷ್ಯ, ಸ್ಪರ್ಧಾತ್ಮಕ ಜಗತ್ತಿಗೆ ಯುವ ಪೀಳೀಗೆಯನ್ನು ಸಜ್ಜುಗೊಳಿಸುವ ಉದ್ದೇಶದೊಂದಿಗೆ ರೂಪಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಯಲ್ಲೂ ಲಭ್ಯವಿದೆ’ ಎಂದು ತಿಳಿಸಿದರು.

ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ ಮ್ಯಾನೇಜ್‌ಮೆಂಟ್‌ ಟ್ರೈನಿ ಸೌಭಾಗ್ಯ ಲಕ್ಷ್ಮಿ, ‘ ಪ್ರಜಾವಾಣಿ’ ಮೈಸೂರು ಬ್ಯುರೋ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಆಲಿವರ್ ವೆಸ್ಲಿ, ಪ್ರಾದೇಶಿಕ ವ್ಯವಸ್ಥಾಪಕ ಬಸವರಾಜು, ಹಾಸನ ಪ್ರತಿನಿಧಿ ಮಲ್ಲೇಶ್‌ ಇದ್ದರು. ‌ ಪ್ರಾಧ್ಯಾಪಕ ಬಾಬು ಪ್ರಸಾದ್ ನಿರೂಪಿಸಿದರು. ಸುರೇಶ್ ಕುಮಾರ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.