ADVERTISEMENT

ಹಾಸನ: ಶಾರ್ಟ್‌ ಸರ್ಕಿಟ್‌ನಿಂದ ಬೆಂಕಿ, ಲಕ್ಷಾಂತರ ಮೌಲ್ಯದ ವಸ್ತು ಭಸ್ಮ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 15:37 IST
Last Updated 27 ನವೆಂಬರ್ 2021, 15:37 IST
ಹಾಸನದ ಕಸ್ತೂರಬಾ ರಸ್ತೆಯಲ್ಲಿರುವ ಪಾದರಕ್ಷೆ, ಬಳೆ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸಾಕಷ್ಟು ವಸ್ತುಗಳು ಸುಟ್ಟು ಹೋಗಿವೆ
ಹಾಸನದ ಕಸ್ತೂರಬಾ ರಸ್ತೆಯಲ್ಲಿರುವ ಪಾದರಕ್ಷೆ, ಬಳೆ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಸಾಕಷ್ಟು ವಸ್ತುಗಳು ಸುಟ್ಟು ಹೋಗಿವೆ   

ಹಾಸನ: ನಗರದ ಕಸ್ತೂರಬಾ ರಸ್ತೆಯಲ್ಲಿರುವ ಪಾದರಕ್ಷೆ, ಬಳೆ ಅಂಗಡಿಗಳಲ್ಲಿ ಶುಕ್ರವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಕಸ್ತೂರಬಾ ರಸ್ತೆಯ ಕೆ.ಎಂ. ಬ್ಯಾಂಗಲ್ಸ್ ಸ್ಟೋರ್ ಹಾಗೂ ಮೊಹಿದೀನ್ ಫುಟ್‌ವೇರ್ ಮಳಿಗೆಬಹುತೇಕ ಅಗ್ನಿಗಾಹುತಿಯಾಗಿದೆ. ಚಪ್ಪಲಿ ಅಂಗಡಿಯಲ್ಲಿ ರಾತ್ರಿ ವ್ಯಾಪಾರ ಮುಗಿಸಿ ಬಾಗಿಲುಹಾಕಿಕೊಂಡು ಹೋದ ನಂತರ ರಾತ್ರೋರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಪ್ರಮಾಣಹೆಚ್ಚಿದ್ದರಿಂದ ಅಂಗಡಿಯೊಳಗಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇಮಾಲೀಕರಿಗೆ ಮಾಹಿತಿ ನೀಡಿದರು.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದರಾರೂ ಆ ವೇಳೆಗಾಗಲೇಅಂಗಡಿಯಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿದ್ದವು. ಜತೆಗೆ ಪಕ್ಕದ ಬ್ಯಾಂಗಲ್ಸ್ಅಂಗಡಿಗೂ ವ್ಯಾಪಿಸಿತ್ತು. ಎರಡನೇ ಅಂಗಡಿಯಲ್ಲೂ ಬಳೆ, ಅಲಂಕಾರಿಕ ವಸ್ತುಗಳು ಸುಟ್ಟು ಹೋಗಿವೆ.

ADVERTISEMENT

ಮಾಹಿತಿ ಸಿಕ್ಕ ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದರಿಂದ ಹೆಚ್ಚಿನ ಅನಾಹುತ ಆಗುವುದು ತಪ್ಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.