ADVERTISEMENT

ವೈಯಕ್ತಿಕವಾಗಿ 42 ಕೆರೆಗಳ ಭರ್ತಿ: ಶಾಸಕ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 4:59 IST
Last Updated 25 ಅಕ್ಟೋಬರ್ 2025, 4:59 IST
ನುಗ್ಗೇಹಳ್ಳಿ ಹೋಬಳಿಯ ಹುಲ್ಲೇನಹಳ್ಳಿ ಗ್ರಾಮದ ಕೆರೆಗೆ ಪೈಪ್ ಲೈನ್ ಮೂಲಕ ನೀರೊದಗಿಸುವ ಯೋಜನೆಗೆ ಶಾಸಕ ಸಿ.ಎನ್. ಬಾಲಕೃಷ್ಣ ಶುಕ್ರವಾರ ಗಂಗೆಪೂಜೆ ನೆರವೇರಿಸಿ ಚಾಲನೆ ನೀಡಿದರು 
ನುಗ್ಗೇಹಳ್ಳಿ ಹೋಬಳಿಯ ಹುಲ್ಲೇನಹಳ್ಳಿ ಗ್ರಾಮದ ಕೆರೆಗೆ ಪೈಪ್ ಲೈನ್ ಮೂಲಕ ನೀರೊದಗಿಸುವ ಯೋಜನೆಗೆ ಶಾಸಕ ಸಿ.ಎನ್. ಬಾಲಕೃಷ್ಣ ಶುಕ್ರವಾರ ಗಂಗೆಪೂಜೆ ನೆರವೇರಿಸಿ ಚಾಲನೆ ನೀಡಿದರು    

ನುಗ್ಗೇಹಳ್ಳಿ: ತಾಲ್ಲೂಕಿನ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಸರ್ಕಾರದ ಅನುದಾನ ನೆಚ್ಚಿಕೊಳ್ಳದೆ ವೈಯಕ್ತಿಕವಾಗಿ 42 ಕೆರೆಗಳನ್ನು ತುಂಬಿಸಲಾಗಿದೆ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಹೋಬಳಿಯ ಹುಲ್ಲೇನಹಳ್ಳಿ ಗ್ರಾಮದ ಕೆರೆಗೆ ಪೈಪ್ ಲೈನ್ ಮೂಲಕ ನೀರೊದಗಿಸುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಳೆದ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಸುಮಾರು ₹13 ಲಕ್ಷ ವೈಯಕ್ತಿಕವಾಗಿ ಹಣ ನೀಡಿ ರಾಯಸಮುದ್ರ ಕಾವಲು ಕೆರೆಯಿಂದ ಸುಮಾರು 3 ಕಿ.ಮೀ. ಪೈಪ್ ಲೈನ್ ಮೂಲಕ ಮೋಟಾರ್ ಅಳವಡಿಸಿ ಕೆರೆಗೆ ನೀರು ಹರಿಸುವ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ’ ಎಂದರು. ಮುಂದಿನ ದಿನಗಳಲ್ಲೂ ಗ್ರಾಮದ ಅಭಿವೃದ್ಧಿಗೆ ಹೆಚ್ಚು ಸಹಕಾರ ನೀಡುವುದಾಗಿ ತಿಳಿಸಿದರು.

ADVERTISEMENT

ಯೋಜನೆಗೆ ಚಾಲನೆ ನೀಡುವ ಮೊದಲು ಗ್ರಾಮದ ಸಂಗಮೇಶ್ವರ, ಲಕ್ಷ್ಮಿ ದೇವಿ, ಯಲ್ಲಮ್ಮ ದೇವಿ, ಚಿಕ್ಕಮ್ಮ ದೇವಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯೋಜನೆಗೆ ಚಾಲನೆ ನೀಡಿದರು.

ಹಾಸನ ಜಿಲ್ಲಾ ಯಾದವ ಸಂಘದ ಮಾಜಿ ಅಧ್ಯಕ್ಷ ಹುಲ್ಲೇನಹಳ್ಳಿ ನಾರಾಯಣ್, ಜೆಡಿಎಸ್ ಯುವ ಮುಖಂಡ ಅಣತಿ ಯೋಗೀಶ್ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಮಾತನಾಡಿದರು.

ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ನುಗ್ಗೇಹಳ್ಳಿ ಗ್ರಾ.ಪಂ. ಅಧ್ಯಕ್ಷ ಹೊನ್ನೇಗೌಡ, ಮಾಜಿ ಅಧ್ಯಕ್ಷ ಎನ್.ಎಸ್. ಮಂಜುನಾಥ್, ಕೃಷಿ ಪತ್ತಿನ ಅಧ್ಯಕ್ಷರಾದ ವಿಕ್ಟರ್, ಮಧು, ಗ್ರಾ.ಪಂ. ಸದಸ್ಯರಾದ ಕಮಲಾಕ್ಷಿ ಗಿರೀಶ್, ನಟರಾಜ್ ಯಾದವ್, ಉದ್ಯಮಿ ಚಿಪ್ಪಿನ ಚಂದ್ರು, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಂಕರ್, ಅಮಾಸಯ್ಯ, ಕೃಷಿ ಪತ್ತಿನ ಮಾಜಿ ಅಧ್ಯಕ್ಷ ರಂಗಪ್ಪ, ಮುಖಂಡರಾದ ದುಗ್ಗೇನಹಳ್ಳಿ ವೀರೇಶ್, ಪುಟ್ಟಸ್ವಾಮಿ, ಹೊಸೂರು ಚಂದ್ರಪ್ಪ, ಕುಳೇ ಗೌಡ, ಹುಲಿಕೆರೆ ಸಂಪತ್ ಕುಮಾರ್, ಎಂ.ಎಸ್. ಸುರೇಶ್, ಮೊದಲಗೆರೆ ದಿಲೀಪ್, ನವೀನ್ ಕುಮಾರ್, ಗುಡಿ ಗೌಡ್ರು ರವೀಶ್, ಯಲ್ಲಪ್ಪ, ಗುತ್ತಿಗೆದಾರ ಕಿರಣ್, ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.