ADVERTISEMENT

ಹಾಸನ | ಭಾವೈಕ್ಯದ ಸಂಕೇತ ಮೊಹರಂ ಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2023, 13:12 IST
Last Updated 29 ಜುಲೈ 2023, 13:12 IST
ಹಾಸನ ಜಿಲ್ಲೆಯ ಅರಸೀಕೆರೆಯ ಕೆಂಡದಗುಂಡಿ ವೃತ್ತದಲ್ಲಿ ನಡೆದ ಮೊಹರಂ ಹಬ್ಬದಲ್ಲಿ ಪಾಲ್ಗೊಂಡಿದ್ದ ಮುಸ್ಲಿಮರು
ಹಾಸನ ಜಿಲ್ಲೆಯ ಅರಸೀಕೆರೆಯ ಕೆಂಡದಗುಂಡಿ ವೃತ್ತದಲ್ಲಿ ನಡೆದ ಮೊಹರಂ ಹಬ್ಬದಲ್ಲಿ ಪಾಲ್ಗೊಂಡಿದ್ದ ಮುಸ್ಲಿಮರು   

ಹಾಸನ: ‘ಮಹಮದ್ ಪೈಗಂಬರ್ ಅವರ ಮೊಮ್ಮಕ್ಕಳು ಶಾಂತಿ ಮತ್ತು ಧರ್ಮಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಪುಣ್ಯ ಸ್ಮರಣೆಯ ಹಿನ್ನೆಲೆಯಲ್ಲಿ ಮೊಹರಂ ಹಬ್ಬವನ್ನು ಆಚರಿಸಲಾಗುತ್ತಿದೆ’ ಎಂದು ಆಂಧ್ರಪ್ರದೇಶದ ಆದೋನಿಯ ಮುಸ್ಲಿಂ ಧರ್ಮಗುರು ಜುಬೇರ್ ಬಾಷಾ ಹೇಳಿದರು.

ಅರಸೀಕೆರೆ ನಗರದ ಕೆಂಡದಗುಂಡಿ ವೃತ್ತದಲ್ಲಿ ಸತತ 8 ದಿನಗಳಿಂದ ನಡೆದ ಮೊಹರಂ ಹಬ್ಬದ ಆಚರಣೆಯ 9ನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅರಸೀಕೆರೆ ಸುನ್ನಿ ಜಾಮೀಯ ಮಸೀದಿಯ ಧರ್ಮಗುರು ಮೌಲಾನಾ ಫೈಯಮುದ್ದೀನ್ ಖಾದ್ರಿ, ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಅಧ್ಯಕ್ಷ ಸಯ್ಯದ್ ರಫೀಕ್, ರಿಯಾಜ್ ಪಾಷಾ, ನವಾಜ್ ಪಾಷಾ ಇದ್ದರು.

ADVERTISEMENT
ಹಾಸನ ಜಿಲ್ಲೆಯ ಅರಸೀಕೆರೆಯ ಕೆಂಡದಗುಂಡಿ ವೃತ್ತದಲ್ಲಿ ನಡೆದ ಮೊಹರಂ ಹಬ್ಬದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮಗುರು ಜುಬೇರ್ ಬಾಷಾ ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.