ADVERTISEMENT

ಒಂಭತ್ತು ಕವನ ಸಂಕಲನ ಲೋಕಾರ್ಪಣೆ

ಹಾಸನದಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2018, 14:27 IST
Last Updated 1 ಜುಲೈ 2018, 14:27 IST
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವನ ಸಂಕಲನಗಳನ್ನು ಸಾಹಿತಿ ಜಯಪ್ಪ ಹೊನ್ನಾಳಿ ಬಿಡುಗಡೆ ಮಾಡಿದರು.
ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವನ ಸಂಕಲನಗಳನ್ನು ಸಾಹಿತಿ ಜಯಪ್ಪ ಹೊನ್ನಾಳಿ ಬಿಡುಗಡೆ ಮಾಡಿದರು.   

ಹಾಸನ : ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ 9 ಕವನ ಸಂಕಲನ ಲೋಕಾರ್ಪಣೆ ಹಾಗೂ ದ್ವಿತೀಯ ರಾಜ್ಯ ಮಟ್ಟದ ಕವಿ-ಕಾವ್ಯ ಸಂಭ್ರಮ ಜರುಗಿತು.

ಮಾಣಿಕ್ಯ ಪ್ರಕಾಶನ, ಸೃಜನಶೀಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಕಾಡೆಮಿ ಆಶ್ರಯದಲ್ಲಿ ವಿಜಯಪುರದ ಸಿದ್ಧಾರೂಢ ಕಟ್ಟಿಮನಿ ಅವರ ‘ಜಾಡಮಾಲಿ ಇಲ್ಲದ ನಗರ’, ಬಳ್ಳಾರಿ ಉಬ್ಬಳಗುಂಡಿ ಶಶಿಧರ ಅವರ ‘ಜೀವಸೆಲೆ’, ಕಾಸರಗೋಡು ವನಿತಾ ಅವರ ’ಪ್ರತಿಬಿಂಬ’, ಗಂಗಾವತಿ ಪತ್ತಾರದ ಲಕ್ಷ್ಮೀದೇವಿ ಅವರ ‘ಕತ್ತಲಿಗಂಟಿದ ಬೆಳಕು’, ಅಂಕೋಲ ರೇಣುಕಾ ರಮಾನಂದ ಅವರ ‘ಮೀನುಪೇಟೆಯ ತಿರುವು’, ಬಾಗಲಕೋಟೆಯ ಮಹಾಂತೇಶ್ ಪಾಟೀಲ್ ಅವರ ‘ಒಡೆದ ಬಣ್ಣದ ಚಿತ್ರಗಳು’, ಶಿವಮೊಗ್ಗದ ಅಜಿತ್ ಹೆಗಡೆ ರಚಿತ ‘ಬಿಳಿಮಲ್ಲಿಗೆಯ ಬಾವುಟ’, ಬೆಂಗಳೂರು ಮಂಜುನಾಥ್ ಸರ್ಜಾಪುರ ಅವರ ‘ತೇಲಿಹೋದ ದೋಣಿ’ ಹಾಗೂ ಹಾಸನದ ವಿನಯಚಂದ್ರ ಅವರ ‘ಮೌನಗೀತ’ ಕವನ ಸಂಕಲನಗಳನ್ನು ಸಾಹಿತಿ ಜಯಪ್ಪ ಹೊನ್ನಾಳಿ ಬಿಡುಗಡೆ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಮಾತನಾಡಿ, ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲೆ ಸೂಕ್ತ ಸ್ಥಳವಾಗಿದೆ. ಸಚಿವ ಎಚ್.ಡಿ. ರೇವಣ್ಣ ಅವರು ಈ ವಿಷಯದಲ್ಲಿ ಆಸಕ್ತಿ ವಹಿಸಬೇಕು. ಬರಹ ಎಂಬುದು ಅಂತರಾಳದಿಂದ ಬರುತ್ತದೆ. ಅದು ಪುಸ್ತಕದ ಮೂಲಕ ಹರಡಿ ಸಂಚಲನ ಉಂಟು ಮಾಡುತ್ತದೆ ಎಂದರು.

ADVERTISEMENT

ಕವಿಗೋಷ್ಠಿ, ಚುಟುಕು ಗೋಷ್ಠಿ ನಡೆಯಿತು.ಹಿರಿಯ ಸಾಹಿತಿ ಸಾಹಿತಿಗಳಾದ ಕೊಟ್ರೇಶ್ ಎಸ್. ಉಪ್ಪಾರ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ವಿನೋದ್‌ ಚಂದ್ರ, ಪತ್ರಕರ್ತೆ ಲೀಲಾವತಿ, ಸಾಮಾಜಿಕ ಕಾರ್ಯಕರ್ತ ತಮ್ಲಾಪುರ ಗಣೇಶ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಒ. ಮಹಾಂತಪ್ಪ, ನಾಗರಾಜು ಹೆತ್ತೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.