ADVERTISEMENT

ನುಗ್ಗೇಹಳ್ಳಿ | ವೈಕುಂಠ ಏಕಾದಶಿ: ಭಕ್ತರಿಗೆ ಲಾಡು ವಿತರಣೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 14:00 IST
Last Updated 10 ಜನವರಿ 2025, 14:00 IST
ನುಗ್ಗೇಹಳ್ಳಿ ಗ್ರಾಮದ ಪೇಟೆ ಬೀದಿಯಲ್ಲಿರುವ ಪುರಾಣ ಪ್ರಸಿದ್ಧ ತಿರುಮಲ ವೆಂಕಟೇಶ್ವರ, ಭೂ ವರಾಹ ಸ್ವಾಮಿ ಹಾಗೂ ಮಹಾಲಕ್ಷ್ಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಶಾಸಕ ಸಿ.ಎನ್ ಬಾಲಕೃಷ್ಣ ಭಾಗವಹಿಸಿದ್ದರು
ನುಗ್ಗೇಹಳ್ಳಿ ಗ್ರಾಮದ ಪೇಟೆ ಬೀದಿಯಲ್ಲಿರುವ ಪುರಾಣ ಪ್ರಸಿದ್ಧ ತಿರುಮಲ ವೆಂಕಟೇಶ್ವರ, ಭೂ ವರಾಹ ಸ್ವಾಮಿ ಹಾಗೂ ಮಹಾಲಕ್ಷ್ಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ನಡೆದ ವಿಶೇಷ ಪೂಜೆಯಲ್ಲಿ ಶಾಸಕ ಸಿ.ಎನ್ ಬಾಲಕೃಷ್ಣ ಭಾಗವಹಿಸಿದ್ದರು   

ನುಗ್ಗೇಹಳ್ಳಿ: ಗ್ರಾಮದ ಪೇಟೆ ಬೀದಿಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ತಿರುಮಲ ವೆಂಕಟೇಶ್ವರ, ಭೂ ವರಾಹ ಸ್ವಾಮಿ ಹಾಗೂ ಮಹಾಲಕ್ಷ್ಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ತಿರುಮಲ ವೆಂಕಟೇಶ್ವರ ಹಾಗೂ ಭೂ ವರಾಹ ಸ್ವಾಮಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ, ಹೂವಿನ ಅಲಂಕಾರ ನಡೆಯಿತು. ಶಾಸಕ ಸಿ.ಎನ್ ಬಾಲಕೃಷ್ಣ ಸೇರಿದಂತೆ ಸಹಸ್ರರು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯ ಆಡಳಿತ ಮಂಡಳಿ ವತಿಯಿಂದ ಭಕ್ತರಿಗೆ ಲಾಡು ಹಾಗೂ ಪುಳಿಯೋಗರೆ ವಿತರಣೆ ಮಾಡಲಾಯಿತು.

ಸಿ.ಎನ್ ಬಾಲಕೃಷ್ಣ ಮಾತನಾಡಿ, ದೇವಾಲಯದ ಆಧುನೀಕರಣಕ್ಕೆ ತಾವು ಹೆಚ್ಚಿನ ಅನುದಾನ ಒದಗಿಸಿದ್ದು, ಮುಂಬರುವ ದಿನಗಳಲ್ಲೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ADVERTISEMENT

ದೇವಾಲಯದ ಮುಖ್ಯ ಅರ್ಚಕರಾದ ವಿ.ಎನ್. ಆಚಾರ್ಯ, ಪ್ರಸನ್ನ ಕೇಶ್ವಚಾರ್, ರಾಜು, ಭಗವಾನ್, ನಾಗರಿಕ ವೇದಿಕೆ ಅಧ್ಯಕ್ಷ ತೋಟಿ ನಾಗರಾಜ್, ಕೃಷಿ ಪತ್ತಿನ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಗ್ರಾಮ ಪಂಚಾಯತಿ ಸದಸ್ಯರಾದ ನಟರಾಜ್ ಯಾದವ್, ಎನ್.ಎಸ್. ಮಂಜುನಾಥ್, ಹೊನ್ನೇಗೌಡ, ಮುಖಂಡರಾದ ಎನ್. ಡಿ. ಶಂಕರ್, ವೀರಶೈವ ಮುಖಂಡ ಕೃಪಾ ಶಂಕರ್, ಬೆಳಗಿಹಳ್ಳಿ ಪುಟ್ಟಸ್ವಾಮಿ, ನೇತ್ರಾವತಿ ದೊರೆಸ್ವಾಮಿ, ಉದ್ಯಮಿ ಸಬ್ಸಿಡಿ ಪುನೀತ್, ಜಂಬೂರ್ ಮಹೇಶ್, ಅಕ್ಕನಹಳ್ಳಿ ದಯಾನಂದ್, ಎನ್.ಆರ್. ಚಂದ್ರು, ಬಸವನಪುರ ಪ್ರಕಾಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.