ಅರಸೀಕೆರೆ: ಗ್ರಾಮಗಳಲ್ಲಿ ಹಬ್ಬ , ಜಾತ್ರಾ ಮಹೋತ್ಸವಗಳನ್ನು ಗ್ರಾಮಸ್ಥರು ಆಚರಿಸುತ್ತಿರುವುದರಿಂದ ಶಾಂತಿ ನೆಮ್ಮದಿ ಸೌಹಾರ್ದದಿಂದ ಬಾಳಲು ಸಾಧ್ಯವಾಗುತ್ತದೆ ಎಂದು ಹಾರನಹಳ್ಳಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಬೊಮ್ಮಸಮುದ್ರ ಗ್ರಾಮದ ಚನ್ನಬಸವೇಶ್ವರ ಸ್ವಾಮಿ ರಥೋತ್ಸವ ಪ್ರಯುಕ್ತ ಗ್ರಾಮಸ್ಥರು ಹಮ್ಮಿಕೊಂಡಿದ್ದ ಪಾದ ಪೂಜೆ ನಂತರ ಅವರು ಆಶೀರ್ವಚನ ನೀಡಿದರು. ಗ್ರಾಮಸ್ಥರಲ್ಲಿ ಮನಸ್ತಾಪ ಬರದಂತೆ , ಒಗ್ಗೂಡಿ ಹೋಗಲು ಹಿರಿಯರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು.
ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ ಮಾತನಾಡಿ, ದಾಸೋಹ ಮತ್ತು ಮಾನವೀಯತೆ ಅಳವಡಿಸಿಕೊಂಡಾಗ ಜೀವನ ಸಾರ್ಥಕ ಗೊಳ್ಳುತ್ತದೆ ಎಂದು ಹೇಳಿದರು.
ಗುಡಿ ಗೌಡ್ರು ಬಸವರಾಜಪ್ಪ , ಮುಖಂಡರಾದ ಬಿ.ಎಂ. ಮಲ್ಲಿಕಾರ್ಜುನ್ , ಶಿವಕುಮಾರ್ , ಚನ್ನಬಸಪ್ಪ , ಮಹೇಶ್ವರಪ್ಪ , ಕೊಡ್ಲಿ ಬಸವರಾಜ್ , ಬೊಮ್ಮಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.