ಕೊಣನೂರು: ಪಟ್ಟಣದ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಷೇರು ಹಣ ₹2000 ಹೆಚ್ಚಿಸುವ ಕುರಿತು ಷೇರುದಾರರು ವಿರೋಧ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ಎಸ್.ಕೆ.ಕೃಷ್ಣ, ಸಂಘದ ಷೇರು ಹಣ ಹೆಚ್ಚಿಸಲು ಉದ್ದೇಶಿಸಿರುವುದಾಗಿ ತಿಳಿಸಿದಾಗ, ಕೆಲ ಸದಸ್ಯರು ವಿರೋಧಿಸಿ, ಮೊದಲಿನಂತೆ ₹1 ಸಾವಿರ ಇರಲಿ ಎಂದರು.
ಈ ಸಂದರ್ಭ ಅಧ್ಯಕ್ಷರು, ಜಿಲ್ಲಾ ಬ್ಯಾಂಕ್‌ಗೆ ಹೆಚ್ಚು ಷೇರುಹಣ ಕಟ್ಟುವುದರಿಂದ ಹೆಚ್ಚುವರಿ ಸಾಲ ಪಡೆಯಲು ಅನುಕೂಲವಾಗುತ್ತದೆ. ಷೇರುದಾರರೆ ಸಂಘದ ಜೀವನಾಡಿಗಳು ಎಂದರು.
ಸಹಕಾರಿ ಬ್ಯಾಂಕ್ ನಿರ್ದೇಶಕ ಕೆ.ಸತೀಶ್ ರಾಮನಾಥಪುರ, ಹೆಚ್ಚು ಲಾಭದಲ್ಲಿ ಇರುವ ಸಂಘ ನಮ್ಮದು. ಮುಂದಿನ ದಿನಗಳಲ್ಲಿ ಹೊಸ ಸಾಲ, ಹೆಚ್ಚುವರಿ ಸಾಲ ಹಾಗೂ ಹಸುವಿನ ಸಾಲ ಸಹ ನೀಡಲಾಗುವುದು ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಬಿ.ಜೆ.ಮಂಜುಳಾ, ಕೊಣನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು ಬಿ, ಉಪಾಧ್ಯಕ್ಷೆ ಪಾವನಾ, ಮೇಲ್ವಿಚಾರಕ ಎಂ.ಎಸ್.ಬಸವರಾಜು, ಇಒ ಕೆ.ಎ.ರಾಮು, ನಿರ್ದೇಶಕ ಶಿವಣ್ಣ, ನಂಜುಂಡೇಗೌಡ, ನಾಗರಾಜು, ಕೆ.ಆರ್.ಸಂದೀಪ್, ಕೆ.ಎಸ್.ನಿತಿನ್, ಸುನೀಲ್ ಕುಮಾರ್, ಪ್ರವೀಣ್, ಬಸವರಾಜನಾಯಕ, ವನಜಾಕ್ಷಿ, ಸುಹೇಲ್ ಪಾಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.