ADVERTISEMENT

ಬೇಲೂರು: ಕಮಲ್ ಹಾಸನ್ ಚಿತ್ರ ಬಿಡುಗಡೆ ಮಾಡದಂತೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:39 IST
Last Updated 3 ಜೂನ್ 2025, 14:39 IST
ಬೇಲೂರಿನ ಬಸವೇಶ್ವರ ವೃತ್ತದಲ್ಲಿ ತಮಿಳು ಚಿತ್ರನಟ ಕಮಲ್ ಹಾಸನ್‌ ವಿರುದ್ಧ ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಪ್ರತಿಭಟಿಸಿದರು
ಬೇಲೂರಿನ ಬಸವೇಶ್ವರ ವೃತ್ತದಲ್ಲಿ ತಮಿಳು ಚಿತ್ರನಟ ಕಮಲ್ ಹಾಸನ್‌ ವಿರುದ್ಧ ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಪ್ರತಿಭಟಿಸಿದರು   

ಬೇಲೂರು: ಕನ್ನಡ ತಮಿಳಿನಿಂದ ಹುಟ್ಟಿದ್ದು ಎನ್ನುವ ಮೂಲಕ ಕನ್ನಡಿಗರನ್ನು ಅವಮಾನಿಸಿರುವ ತಮಿಳು ಚಿತ್ರನಟಕಮಲ್ ಹಾಸನ್ ಚಿತ್ರಗಳನ್ನು ಕರ್ನಾಟಕ ರಾಜ್ಯದಲ್ಲಿ ಬಿಡುಗಡೆ ಮಾಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ್ ಹೇಳಿದರು.

ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಕಮಲ್ ಹಾಸನ್ ವಿರುದ್ಧ ಮಂಗಳವಾರ ಪ್ರತಿಭಟಿಸಿ ಅವರು ಮಾತನಾಡಿದರು. ತಮಿಳು ಚಿತ್ರನಟ ಕಮಲ್ ಹಾಸನ್ ಚಲನ ಚಿತ್ರವೊಂದರ ಧ್ವನಿಸುರುಳಿ ಬಿಡುಗಡೆ ಸಂದರ್ಭ ಕನ್ನಡದ ಬಗ್ಗೆ ಮಾತನಾಡಿರುವ ಆಕ್ಷೇಪಾರ್ಹ ಹೇಳಿಕೆ ಖಂಡಿಸುತ್ತೇವೆ. ಕನ್ನಡ ವಿರೋಧಿ ಕಮಲ ಹಾಸನ್‌ಗೆ ಕನ್ನಡದ ಸಂಸ್ಕೃತಿ ಗೊತ್ತಿಲ್ಲ. ಅವರ ಚಲನ ಚಿತ್ರಗಳನ್ನು ಬಿಡುಗಡೆ ಮಾಡಿದರೆ ಅಂತಹ ಥಿಯೇಟರ್‌ಗಳಿಗೆ ಬೆಂಕಿ ಹಾಕುತ್ತೇವೆ. ಕನಾಟಕಕ್ಕೆ ಬಂದರೆ ಅವನಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಕಾರ್ಯದರ್ಶಿ ಮಂಜುನಾಥ್, ಗೌರವಾಧ್ಯಕ್ಷ ಧರ್ಮೇಗೌಡ, ಮುಖಂಡ ಸುರೇಶ್, ಮಂಜುನಾಥ, ಮಲ್ಲೇಶ, ಮಧುಸೂದನ್  ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.