ADVERTISEMENT

ಛತ್ರಿ ಹಿಡಿದು ದೇವಾಲಯ ವೀಕ್ಷಿಸಿದ ಪ್ರವಾಸಿಗರು

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 2:59 IST
Last Updated 15 ಜೂನ್ 2022, 2:59 IST
ಹಳೇಬೀಡಿನಲ್ಲಿ ಮಂಗಳವಾರ ಮಧ್ಯಾಹ್ನ ಮಳೆ ಬಿದ್ದಿದ್ದರಿಂದ ಪ್ರವಾಸಿಗರು ಛತ್ರಿ ಹಿಡಿದು ಹೊಯ್ಸಳೇಶ್ವರ ದೇವಾಲಯ ವೀಕ್ಷಣೆ ಮಾಡಿದರು.
ಹಳೇಬೀಡಿನಲ್ಲಿ ಮಂಗಳವಾರ ಮಧ್ಯಾಹ್ನ ಮಳೆ ಬಿದ್ದಿದ್ದರಿಂದ ಪ್ರವಾಸಿಗರು ಛತ್ರಿ ಹಿಡಿದು ಹೊಯ್ಸಳೇಶ್ವರ ದೇವಾಲಯ ವೀಕ್ಷಣೆ ಮಾಡಿದರು.   

ಹಳೇಬೀಡು: ಪಟ್ಟಣದಲ್ಲಿ ಮಂಗಳವಾರ ಮಧ್ಯಾಹ್ನ ಸಾಧಾರಣ ಮಳೆ ಸುರಿಯಿತು. ಒಂದು ಗಂಟೆಗೂ ಹೆಚ್ಚು ಮಳೆ ಸುರಿದರೂ, ಸಂಜೆ ಉಷ್ಣಾಂಶ ಹೆಚ್ಚಾಗಿತ್ತು.

ಮಾಯಗೊಂಡನಹಳ್ಳಿ, ಚಟಚಟ್ಟಿಹಳ್ಳಿ, ರಾಮನಹಳ್ಳಿ ಮೊದಲಾದ ಗ್ರಾಮಗಳ ಸುತ್ತಮುತ್ತ ಜೋರು ಮಳೆ ಸುರಿದು ಭೂಮಿ ತಂಪಾಯಿತು. ಕೆಲವು ಗ್ರಾಮಗಳಿಗೆ ಸಮೃದ್ದ ಮಳೆ ಬಿದ್ದರೆ, ಹಲವು ಗ್ರಾಮಗಳಿಗೆ ಒಂದು ಹನಿ ಮಳೆಯೂ ಬರಲಿಲ್ಲ.

ದೂರದಿಂದ ಬಂದಿದ್ದ ಪ್ರವಾಸಿಗರು ಛತ್ರಿ ಹಿಡಿದು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಶಿಲ್ಪಕಲೆ ವಿಕ್ಷಣೆ ಮಾಡಿದರು. ಮಾರ್ಗದರ್ಶಿಗಳು ಮಳೆಯಲ್ಲಿಯೇ ಪ್ರವಾಸಿಗರಿಗೆ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.