ADVERTISEMENT

ವೃದ್ಧಾಶ್ರಮಕ್ಕೆ ಪ್ರತಿ ವರ್ಷ ದೇಣಿಗೆ: ಭರವಸೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 2:59 IST
Last Updated 26 ಸೆಪ್ಟೆಂಬರ್ 2025, 2:59 IST
ಅರಕಲಗೂಡಿನ ಮಧುಶ್ರೀ ವೃದ್ಧಾಶ್ರಮದ ನಿವಾಸಿಗಳಿಗೆ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಅಗತ್ಯ ವಸ್ತುಗಳನ್ನು ವಿತರಿಸಿದರು.
ಅರಕಲಗೂಡಿನ ಮಧುಶ್ರೀ ವೃದ್ಧಾಶ್ರಮದ ನಿವಾಸಿಗಳಿಗೆ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ್ ಅಗತ್ಯ ವಸ್ತುಗಳನ್ನು ವಿತರಿಸಿದರು.   

ಅರಕಲಗೂಡು: ಪಟ್ಟಣದ ಹೊರವಲಯದ ಶಂಭುನಾಥಪುರದಲ್ಲಿರುವ ಮಧುಶ್ರೀ ವೃದ್ಧಾಶ್ರಮಕ್ಕರ ಪ್ರತಿ ವರ್ಷ  ₹10 ಸಾವಿರ ದೇಣಿಗೆ ನೀಡುವುದಾಗಿ ಸಂಗೀತ ವಿದ್ವಾಂಸ ಆರ್. ಕೆ. ಪದ್ಮನಾಭ್ ತಿಳಿಸಿದರು.

ಗುರುವಾರ ತಮ್ಮ ಜನ್ಮದಿನವನ್ನು ವೃದ್ದಾಶ್ರಮದ ವೃದ್ಧರೊಂದಿಗೆ ಆಚರಿಸಿ, ಅಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.

‘ವೃದ್ಧರು ಇಳಿವಯಸ್ಸಿನ ಬದುಕು ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವುದು ಅಗತ್ಯ, ಮಧುಶ್ರೀ ವೃದ್ಧಾಶ್ರಮ ಉತ್ತಮ ಕಾರ್ಯ ನಡೆಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ವೃದ್ದಾಶ್ರಮದ ಕಾರ್ಯದರ್ಶಿ ಸಾವಿತ್ರಮ್ಮ, ವ್ಯವಸ್ಥಾಪಕ ಮಧು, ಸ್ವಯಂಸೇವಕ ಪ್ರಕಾಶ್, ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಅಪ್ತ ಸಮಾಲೋಚಕ ಪರಶುರಾಮ್, ಪ್ರಯೋಗಶಾಲಾ ತಂತ್ರಜ್ಞೆ ಗೌರಮ್ಮ, ಆರ್.ಕೆ.ಪಿ ಬಳಗದ ವಾಟಳ್ ರಮೇಶ್, ಯೋಗೇಶ್, ತಿಲಕ್ ಕುಮಾರ್, ಪ್ರವೀಣ್, ಮಂಜು, ವಿಜಯಕುಮಾರ್, ಗುರುಮೂರ್ತಿ , ಉಮೇಶ್, ಧರ್ಮ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.