ಹಿರೀಸಾವೆ: ಮಟ್ಟನವಿಲೆಯಲ್ಲಿ ಕೆಎಸ್ಆರ್‌ಟಿಸಿ ಬಸ್ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಶ್ರವಣಬೆಳಗೊಳ ಹೋಬಳಿಯ ಗುಳ್ಳೇನಹಳ್ಳಿ ವಾಸಿ ಗೋಪಾಲಗೌಡ (45) ಎಂಬುವರು ಮೃತಪಟ್ಟಿದ್ದಾರೆ.
ಗೋಪಾಲಗೌಡ ಹಾಗೂ ಅವರ ಸಂಬಂಧಿ ಮಮತಾ ಎಂಬುವರು ಸ್ಕೂಟರ್‌ನಲ್ಲಿ ಮಟ್ಟನವಿಲೆಯಿಂದ ಸ್ವ ಗ್ರಾಮಕ್ಕೆ ಹೋಗಲು ಎನ್ಎಚ್ 75ರ ಸರ್ವೀಸ್ ರಸ್ತೆ ದಾಟುವಾಗ, ಬೆಂಗಳೂರು ಕಡೆಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಸವಾರ ಮೃತಪಟ್ಟರೆ, ಮಹಿಳೆ ಗಾಯಗೊಂಡಿದ್ದಾರೆ.
ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.