ADVERTISEMENT

ಬೇಲೂರು| ನಿಯಮ ಉಲ್ಲಂಘನೆ, ಬುದ್ಧಿವಂತರೇ ಹೆಚ್ಚು: ಹಿರಿಯ ನ್ಯಾಯಾಧೀಶೆ ಎಂ.ಶಶಿಕಲಾ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:38 IST
Last Updated 13 ಜನವರಿ 2026, 5:38 IST
ಬೇಲೂರಿನಲ್ಲಿ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಬೀದಿ ನಾಟಕ ಹಾಗೂ ಜಾಗೃತಿ ಜಾಥಾಕ್ಕೆ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಎಂ.ಶಶಿಕಲಾ ಚಾಲನೆ ನೀಡಿದರು. ಇನ್‌ಸ್ಪೆಕ್ಟರ್ ರೇವಣ್ಣ ಪಾಲ್ಗೊಂಡಿದ್ದರು
ಬೇಲೂರಿನಲ್ಲಿ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಬೀದಿ ನಾಟಕ ಹಾಗೂ ಜಾಗೃತಿ ಜಾಥಾಕ್ಕೆ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಎಂ.ಶಶಿಕಲಾ ಚಾಲನೆ ನೀಡಿದರು. ಇನ್‌ಸ್ಪೆಕ್ಟರ್ ರೇವಣ್ಣ ಪಾಲ್ಗೊಂಡಿದ್ದರು   

ಬೇಲೂರು: ಸರ್ಕಾರ ರಸ್ತೆ ಸುರಕ್ಷತೆಯ ಬಗ್ಗೆ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಬುದ್ಧಿವಂತರೇ ಹೆಚ್ಚು ರಸ್ತೆ ಸುರಕ್ಷತೆ ನಿಯಮಗಳನ್ನು ಉಲ್ಲಂಘಿಸುವುದನ್ನು ಕಾಣಬಹುದಾಗಿದೆ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶೆ ಎಂ.ಶಶಿಕಲಾ ಹೇಳಿದರು.

ಇಲ್ಲಿನ ಚನ್ನಕೆಶವಸ್ವಾಮಿ ದೇಗುಲದ ಆವರಣದಲ್ಲಿ, ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಯಿಂದ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸೋಮವಾರ ಆಯೋಜಿಸಿದ್, ಬೀದಿ ನಾಟಕ ಹಾಗೂ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರ ಸುರಕ್ಷತೆಗೆ ಪೊಲೀಸರು ಬೇಕು. ಆದರೆ ಸಂಚಾರ ನಿಯಮ ಉಲ್ಲಂಘಿಸಿದಾಗ ದಂಡ ಹಾಕಿದರೆ ಅವರ ವಿರುದ್ಧವೇ ತಿರುಗಿ ನಿಲ್ಲುವುದು ಎಷ್ಟು ಸರಿ? ಸಂಚಾರ ನಿಯಮವನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು. ವಾಹನಗಳನ್ನು ಓಡಿಸುತ್ತಲೇ ಮೊಬೈಲ್‌ ಫೋನ್‌ನಲ್ಲಿ ಮಾತಾನಾಡುವುದು ಅಪರಾಧ. ಅಪ್ರಾಪ್ತರಿಗೆ ವಾಹನ ನೀಡುವುದು ತಪ್ಪು ಎಂದರು.

ಪೊಲೀಸ್ ಇನ್‌ಸ್ಪೆಕ್ಟರ್‌ ರೇವಣ್ಣ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸಂಚಾರ ನಿಯಮ ಉಲ್ಲಂಘನೆಯಾಗುತ್ತಿದೆ. ತಾಲ್ಲೂಕಿನಲ್ಲಿ ಕಳೆದ 5 ವರ್ಷಗಳಿಂದ 91 ಅಪಘಾತಗಳು ಸಂಭಂವಿಸಿವೆ. ಇದರಲ್ಲಿ 93 ಜನ ಮೃತಪಟ್ಟಿದ್ದಾರೆ ಎಂದರು.

ADVERTISEMENT

ವಿಶ್ವ ಹಾಗೂ ಬಿಜಿಎಸ್ ಕಾಲೇಜುಗಳ ವಿದ್ಯಾರ್ಥಿಗಳು, ಆಟೊ ಚಾಲಕರು ಹಾಗೂ ಪೊಲೀಸ್ ಸಿಬ್ಬಂದಿ ಚನ್ನಕೇಶವಸ್ವಾಮಿ ದೇಗುಲ ಆವರಣದಿಂದ ಮೆರವಣಿಗೆ ಮೂಲಕ ಭಿತ್ತಿ ಪತ್ರಗಳನ್ನು ಹಿಡಿದು ಜನರಲ್ಲಿ ಜಾಗೃತಿ ಮೂಡಿಸಿದರು.

ಮಿಸೆ ಮಹೇಶ್‌ಗೌಡ ಯಮನ ಪಾತ್ರದಲ್ಲಿ ಹಾಗೂ ಚಿತ್ರಗುಪ್ತನ ಪಾತ್ರದಲ್ಲಿ ಎಎಸ್‌ಐ ಸೋಮಶೇಖರ್ ವಿಶೇಷವಾಗಿ ಬೀದಿ ನಾಟಕದ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಜಾಥಾದಲ್ಲಿ ಅರಿವು ಮೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.