ಬೇಲೂರು: ಇಲ್ಲಿನ ವೀರಾಂಜನೇಯಸ್ವಾಮಿ ದೇಗುಲ ಸಮಿತಿ ಹಾಗೂ ಹನುಮ ಜಯಂತಿ ಸೇವಾ ಟ್ರಸ್ಟ್ ವತಿಯಿಂದ ಡಿ.21 ರಂದು ನಡೆದ ಹನುಮ ಜಯಂತಿಯ ಲೆಕ್ಕವನ್ನು ಸಮಿತಿಯಿಂದ ಸಾರ್ವಜನಿಕರಿಗೆ ನೀಡಲಾಯಿತು.
ಹನುಮ ಜಯಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನಕುಮಾರ್, ಸಂಚಾಲಕ ಎನ್.ಆರ್.ಸಂತೋಷ್ ಮತ್ತು ಖಜಾಂಚಿ ಅನಂತರಾಜೇ ಅರಸು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು, ಹನುಮ ಜಯಂತಿ ಮತ್ತು ಶೋಭಾಯಾತ್ರೆಗೆ ದಾನಿಗಳಿಂದ ₹ 21.74 ಲಕ್ಷ ದೇಣಿಗೆ ಬಂದಿದೆ. ₹17.62 ಲಕ್ಷ ವೆಚ್ಚವಾಗಿದ್ದು, ₹4.12 ಲಕ್ಷ ಉಳಿತಾಯವಾಗಿದೆ. ಕಳೆದ 11 ವರ್ಷಗಳಿಂದ ಸರ್ವರ ಸಹಕಾರದಿಂದ ಹನುಮ ಜಯಂತಿ ಮತ್ತು ಶೋಭಾಯಾತ್ರೆ ನಡೆಯುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ತಕರಾರು ಬಾರದಂತೆ ಲೆಕ್ಕಾಚಾರ ನೀಡಲಾಗಿದ್ದು, ಉಳಿತಾಯವಾಗಿರುವ ₹4.12 ಲಕ್ಷವನ್ನು ಸದ್ಯ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡಲಾಗಿದ್ದು, ಸಮಿತಿಯ ಸದಸ್ಯರ ಅಭಿಪ್ರಾಯ ಪಡೆದು ದೇಗುಲದ ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗುವುದು ಎಂದು ತಿಳಿಸಿದರು.
ಮುಖ್ಯರಸ್ತೆ ಕಿರಿದಾದ ಹಿನ್ನೆಲೆಯಲ್ಲಿ ವಿವಿಧ ರೀತಿಯ ಮೆರವಣಿಗೆಗಳು ಸಾಗುವ ಸಂದರ್ಭಗಳಲ್ಲಿ ಸಾಕಷ್ಟು ತೊಂದರೆ ಆಗುತ್ತಿರುವುದರಿಂದ ಮುಖ್ಯರಸ್ತೆ ಮತ್ತು ಹೊಳೆಬೀದಿ ರಸ್ತೆಯನ್ನು ಶ್ರೀಘ್ರವಾಗಿ ವಿಸ್ತರಿಸಲು ಶಾಸಕರು ಮುಂದಾಗಬೇಕು ಎಂದು ಒತ್ತಾಯಿದರು. ಹನುಮ ಜಯಂತಿ ಸೇವಾ ಟ್ರಸ್ಟ್ ಉಪಾಧ್ಯಕ್ಷರಾದ ಬಾಬು, ಶೇಖರ್ ಮತ್ತು ಪ್ರಧಾನ ಕಾರ್ಯದರ್ಶಿ ನಂಜೇಗೌಡ, ಸಂತೋಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.