ADVERTISEMENT

ಶ್ರವಣಬೆಳಗೊಳ | 160 ಮನೆಗಳಿಗೆ ವಿದ್ಯುತ್ : ಶಾಸಕ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 5:35 IST
Last Updated 8 ಫೆಬ್ರುವರಿ 2026, 5:35 IST
ಶ್ರವಣಬೆಳಗೊಳ ಹೋಬಳಿಯ ಕೆ.ಹೊಸಹಳ್ಳಿಯಲ್ಲಿ ಏರ್ಪಡಿಸಿದ್ದ ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಪೂಜೆ ನೆರವೇರಿಸಿದರು.
ಶ್ರವಣಬೆಳಗೊಳ ಹೋಬಳಿಯ ಕೆ.ಹೊಸಹಳ್ಳಿಯಲ್ಲಿ ಏರ್ಪಡಿಸಿದ್ದ ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಪೂಜೆ ನೆರವೇರಿಸಿದರು.   

ಶ್ರವಣಬೆಳಗೊಳ: ‘ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಯೋಜನೆಯಡಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಟ್ಟು ಹೋಗಿದ್ದ  ಕೆ.ಹೊಸಹಳ್ಳಿ, ಸುಗ್ಗನಹಳ್ಳಿ, ಕೆ.ಬೊಮ್ಮೇನಹಳ್ಳಿ, ಕಂಠೀರಾಯಪುರ ಗ್ರಾಮಗಳ 160 ಮನೆಗಳಿಗೆ, ನೂತನ ಬಡಾವಣೆಗಳಿಗೆ ಶಾಶ್ವತ ಸಂಪರ್ಕವನ್ನು ಕಲ್ಪಿಸಲಾಗುತ್ತಿದೆ’ ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಗುರುವಾರ ಹೇಳಿದರು.

‘ಈ ಗ್ರಾಮಗಳು ಕಾಂತರಾಜಪುರ ದಮ್ಮನಿಂಗಲ, ಕಬ್ಬಾಳು, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳ ಪಟ್ಟಿದ್ದು, ಯೋಜನೆಯಡಿ ಈಗಾಗಲೇ ಎಲ್ಲ ಹಳ್ಳಿಗಳಿಗೂ  ವಿದ್ಯುತ್ ಕಂಬ ಟ್ರಾನ್ಸ್‌ಫಾರ್ಮರ್ ಒದಗಿಸಲಾಗಿದೆ’ ಎಂದರು.  ನೂತನ ಬಡಾವಣೆ ಮತ್ತು ರಸ್ತೆ ಬದಿ ಮನೆಗಳಿಗೂ ವಿದ್ಯುತ್ ಸಂಪರ್ಕ ದೊರೆಯುತ್ತಿ ಎಂದು ವಿದ್ಯುತ್‌ ಇಲಾಖೆ ಅಧಿಕಾರಿಗಳನ್ನು ಶ್ಲಾಘಿಸಿದರು. ಈ ಭಾಗದ ಕುಡಿಯುವ ನೀರಿಗೂ ನಿರಂತರ ವಿದ್ಯುತ್ ದೊರೆಯಲಿದ್ದು, ಹಳ್ಳಿಯ ಜನರು, ಉದ್ಯಮಗಳಿಗೆ ಅನುಕೂಲವಾಗಲಿದೆ ಎಂದರು.

 ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಆರ್.ರಮೇಶ್, ಶ್ರೀನಿವಾಸಪುರ ಸಕ್ಕರೆ ಕಾರ್ಖಾನೆಯ ಶಿವರಾಜು, ಸೆಸ್ಕ್‌ ಎಂಜಿನಿಯರ್‌  ಚಂದ್ರಶೇಖರ್, ತಾಲ್ಲೂಕು ವಿದ್ಯುತ್ ಗುತ್ತಿಗೆದಾರ ರಮೇಶ್, ಮಂಜೇಗೌಡ, ಬಸವರಾಜು, ಕುಮಾರ ಪಾಲ್ಗೊಂಡಿದ್ದರು.

ADVERTISEMENT
ಶ್ರವಣಬೆಳಗೊಳ ಹೋಬಳಿಯ ಕೆ.ಹೊಸಹಳ್ಳಿಯಲ್ಲಿ ಏರ್ಪಡಿಸಿದ್ದ ನಿರಂತರ ಜ್ಯೋತಿ ಯೋಜನೆಯಡಿಯಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಪೂಜೆ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.