
ಸಕಲೇಶಪುರ: ವಿದ್ಯಾರ್ಥಿಗಳು ಬಾಲ್ಯದಿಂದಲೇ ದೇಶದ ಪ್ರೇಮ ಬೆಳಿಸಿಕೊಳ್ಳಬೇಕು’ ಎಂದು ನಿವೃತ್ತ ಯೋಧ ಗಾಡೇನಹಳ್ಳಿ ಯೋಗೇಶ್ ಹೇಳಿದರು.
ಇಲ್ಲಿನ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಸ್ಥಳೀಯ ಅಚೀವರ್ಸ್ ಪ್ರಜ್ಞಾ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮಾತನಾಡಿ, ‘ವಿಜ್ಞಾನ ಮುಂದುವರೆದಂತೆ ಮನುಷ್ಯ ಯಂತ್ರದಂತೆ ಕೆಲಸ ಮಾಡುತ್ತಾ ಸ್ವಾರ್ಥಿಯಾಗುತ್ತಿದ್ದಾನೆ. ಜೊತೆಗೆ ಐಷಾರಾಮಿ ಬದುಕಿನ ಬೆನ್ನು ಹತ್ತಿರುವ ಪರಿಣಾಮ, ನಮ್ಮವರು, ನಮ್ಮದೇಶ ಎಂಬ ಅಭಿಮಾನ, ಗೌರವ ಭಕ್ತಿ ಕಡಿಮೆಯಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಅಚೀವರ್ಸ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೋಗರವಳ್ಳಿ ಬಿ.ಎನ್ ಸಂತೋಷ್ ಮಾತನಾಡಿ, ‘ಮಲೆನಾಡಿನ ಈ ತಾಲ್ಲೂಕಿನಲ್ಲಿ ಪದವಿ ಪೂರ್ವ ಶಿಕ್ಷಣದ ಕೊರತೆಯನ್ನು ಸ್ವಲ್ಪ ಮಟ್ಟಿಗೆ ಅಚೀವರ್ಸ್ ಕಾಲೇಜು ಇಂಗಿಸಿದೆ. ಇನ್ನೂ ಸಹ ಹಲವು ವಿದ್ಯಾರ್ಥಿಗಳು ದೂರದ ಮಂಗಳೂರು, ಹಾಸನ, ಬೆಂಗಳೂರು ಕಡೆ ಹೋಗುತ್ತಿದ್ದಾರೆ. ಸ್ಥಳೀಯವಾಗಿಯೇ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಶಿಕ್ಷಣವನ್ನು ಇನ್ನೂ ಗುಣಮಟ್ಟದಲ್ಲಿ ಮಾಡಲು ತಮ್ಮ ಶಕ್ತಿ ಮೀರಿ ಶ್ರಮಿಸಲಾಗುವುದು’ ಎಂದರು.
ಅರೇಹಳ್ಳಿಯ ರೋಟರಿ ಶಾಲೆಯ ಸಂಯೋಜಕಿ ಭವಾನಿ, ಹೆತ್ತೂರು ಕೆ.ಪಿ.ಎಸ್ ಶಾಲೆಯ ಉಪ ಪ್ರಾಂಶುಪಾಲ ಬಿ. ಭಾಸ್ಕರ್ ಮಾತನಾಡಿದರು.
ಪ್ರಜ್ಞಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಇ.ಎಚ್. ಲಕ್ಷ್ಮಣ್, ಅಚೀವರ್ಸ್ ಪ್ರಜ್ಞಾ ಕಾಲೇಜು ಪ್ರಾಂಶುಪಾಲ ಜುಲ್ಫೀಕರ್ ಅಹಮ್ಮದ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕಾರ್ತಿಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.