ADVERTISEMENT

ಹಾಸನ‌: ಮನೆಗಳಲ್ಲಿ ಸಂಕ್ರಾಂತಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 12:55 IST
Last Updated 14 ಜನವರಿ 2021, 12:55 IST
ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಾಸನದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮಕ್ಕಳು ಹೊಸ ಬಟ್ಟೆ ಧರಿಸಿ ಎಳ್ಳು, ಬೆಲ್ಲ ವಿತರಿಸಿದರು
ಸಂಕ್ರಾಂತಿ ಹಬ್ಬದ ಪ್ರಯುಕ್ತ ಹಾಸನದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮಕ್ಕಳು ಹೊಸ ಬಟ್ಟೆ ಧರಿಸಿ ಎಳ್ಳು, ಬೆಲ್ಲ ವಿತರಿಸಿದರು   

ಹಾಸನ‌: ನಗರ ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ಸಂಭ್ರಮದಿಂದಆಚರಿಸಲಾಯಿತು.

ಮಹಿಳೆಯರು, ಹೆಣ್ಣು ಮಕ್ಕಳು ಮನೆಯ ಆವರಣ ಸ್ವಚ್ಛಗೊಳಿಸಿ ಅಂದವಾದ ರಂಗೋಲಿ ಬಿಡಿಸಿದರು.ಬಾಗಿಲುಗಳಿಗೆ ತೋರಣ ಕಟ್ಟಿ ಸಿಂಗರಿಸಿದರು. ಮಕ್ಕಳು, ಹಿರಿಯರು ಹೊಸಬಟ್ಟೆ ಧರಿಸಿ ಎಳ್ಳು–ಬೆಲ್ಲ ಬೀರಿ ಶುಭಾಶಯ ಕೋರಿದರು.

ನಗರದ ವಿವಿಧ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ಭಕ್ತರು ದೇವರ ದರ್ಶನ ಪಡೆಯಲು ಸಾಲುಗಟ್ಟಿನಿಂತಿದ್ದರು. ಎಳ್ಳು, ಬೆಲ್ಲದ ಮಿಶ್ರಣ ಸಿಹಿ ಪೋಂಗಲ್‌ ನ್ನು ದೇವರಿಗೆ ನೇವೈದ್ಯವಾಗಿ ಅರ್ಪಿಸಲಾಯಿತು.ರಿಂಗ್‌ ರೋಡ್‌ನಲ್ಲಿರುವ ಚಾಮುಂಡೇಶ್ವರಿ ದೇವಿಗೆ ಹೂವು ಮತ್ತು ತರಕಾರಿಗಳಿಂದ ಅಲಂಕಾರ ಮಾಡಲಾಗಿತ್ತು.ಮನೆಗಳಲ್ಲಿ ಪೂಜೆಯ ಸಂಭ್ರಮ ಮನೆ ಮಾಡಿತ್ತು.

ADVERTISEMENT

ಗ್ರಾಮೀಣ ಭಾಗದಲ್ಲಿ ಗೋವುಗಳನ್ನು ತೊಳೆದು ವಿಶೇಷವಾಗಿ ಸಿಂಗರಿಸಲಾಗಿತ್ತು. ಮೈಗೆ ಅರಿಶಿಣ ಬಣ್ಣ ಹಾಗೂಕೊಂಬುಗಳನ್ನು ಬಣ್ಣ ಬಣ್ಣದ ಕಾಗದಗಳಿಂದ ಅಲಂಕರಿಸಲಾಗಿತ್ತು. ಗೋಪೂಜೆ ಮಾಡಿ, ನೈವೇದ್ಯಅರ್ಪಿಸಿದರು. ಮನೆಗಳಲ್ಲಿ ಪೊಂಗಲ್‌, ಕಡುಬು, ಪಾಯಸ ತಯಾರಿಸಿ ಸವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.