ADVERTISEMENT

ರಾಮನಾಥಪುರದಲ್ಲಿ ಸಂಕ್ರಾಂತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 14:07 IST
Last Updated 15 ಜನವರಿ 2024, 14:07 IST
ರಾಮನಾಥಪುರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ರಾಮೇಶ್ವರಸ್ವಾಮಿ, ಅಗಸ್ತ್ಯೇಶ್ವರಸ್ವಾಮಿ, ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಉತ್ಸವ ಮೂರ್ತಿಗಳನ್ನು ಮೆರವಣಿಗೆ ನಡೆಸಿದರು
ರಾಮನಾಥಪುರದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ರಾಮೇಶ್ವರಸ್ವಾಮಿ, ಅಗಸ್ತ್ಯೇಶ್ವರಸ್ವಾಮಿ, ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಉತ್ಸವ ಮೂರ್ತಿಗಳನ್ನು ಮೆರವಣಿಗೆ ನಡೆಸಿದರು   

ಕೊಣನೂರು: ದಕ್ಷಿಣಕಾಶಿ ಪ್ರಸಿದ್ಧಿಯ ರಾಮನಾಥಪುರದಲ್ಲಿ ಸಂಕ್ರಾಂತಿಯ ನಿಮಿತ್ತ ವಿವಿಧ ಉತ್ಸವಗಳು ಜರಗಿದವು.

ಇಲ್ಲಿನ ಚತುಯರ್ಗ ಮೂರ್ತಿ ರಾಮೇಶ್ವರಸ್ವಾಮಿ, ಅಗಸ್ತ್ಯೇಶ್ವರಸ್ವಾಮಿ, ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಉತ್ಸವಗಳ ಮೆರವಣಿಗೆ ಮನಸೆಳೆಯಿತು.

ವಿವಿಧ ದೇವಾಲಯಗಳಿಂದ ಹೊರಟ ದೇವತೆಗಳ ಉತ್ಸವದ ಸಾಲು ಸಂಕ್ರಾಂತಿ ಮಂಟಪ ತಲುಪಿ, ಅಲ್ಲಿ ಮೂರು ದೇವರ ಮೂರ್ತಿಗಳಿಗೂ ಸಂಕ್ರಾಂತಿ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ಉತ್ಸವದ ಮಾರ್ಗದುದ್ದಕ್ಕೂ ಭಕ್ತರು ದೇವರ ದರ್ಶನ ಪಡೆದು ಹಣ್ಣುಕಾಯಿ ಅರ್ಪಿಸಿದರು.

ADVERTISEMENT

ಸಾವಿರಾರು ಭಕ್ತರು ಸಂಕ್ರಾಂತಿ ಹಬ್ಬದ ಅಂಗವಾಗಿ ಕಾವೇರಿ ಸ್ನಾನ ಘಟ್ಟದಲ್ಲಿ ಮಿಂದರು. ಬಳಿಕ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.