ADVERTISEMENT

ಪಾರ್ಶ್ವನಾಥ ಸ್ವಾಮಿಗೆ ವೈಭವದ ವಿಶೇಷ ಅಭಿಷೇಕ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 3:02 IST
Last Updated 26 ಡಿಸೆಂಬರ್ 2025, 3:02 IST
ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿರುವ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ಜಲಾಭಿಷೇಕ ನಡೆಸಲಾಯಿತು
ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿರುವ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ಜಲಾಭಿಷೇಕ ನಡೆಸಲಾಯಿತು   

ಶ್ರವಣಬೆಳಗೊಳ: ಇಲ್ಲಿಯ ಚಂದ್ರಗಿರಿ ಚಿಕ್ಕಬೆಟ್ಟದ 18 ಅಡಿಯ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ನಾಗರ ಪಂಚಮಿ ಪ್ರಯುಕ್ತ ಗುರುವಾರ ಕ್ಷೇತ್ರದ ಪೀಠಾಧಿತಿ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರದ್ಧಾ ಭಕ್ತಿಯಿಂದ ಮಸ್ತಕಾಭಿಷೇಕವನ್ನು ನೆರವೇರಿಸಲಾಯಿತು.

23ನೇ ತೀರ್ಥಂಕರರಾದ ಭಗವಾನ್ ಪಾರ್ಶ್ವನಾಥ ಸ್ವಾಮಿಯ ಸನ್ನಿಧಿಯಲ್ಲಿ ಮಂಗಲದ ಶಾಂತಿಧಾರಾ ಕಲಶ ಪ್ರತಿಷ್ಠಾಪಿಸಿ ಣಮೋಕಾರ ಮಹಾಮಂತ್ರಗಳೊಂದಿಗೆ ಸಕಲ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ಪ್ರತ್ಯೇಕವಾಗಿ ಜಿನ ಮೂರ್ತಿಗೆ ಜಲ, ಎಳನೀರು ಕಬ್ಬಿನಹಾಲು, ಕ್ಷೀರ, ಕಲ್ಕಚೂರ್ಣ, ಕಷಾಯ, ಅರಿಸಿನ, ಅಷ್ಟಗಂಧ ಮತ್ತು ಶ್ರೀಗಂಧದಿಂದ ಅಭಿಷೇಕ ನಡೆಸಿ ಪುಷ್ಪವೃಷ್ಟಿ ಮಾಡಲಾಯಿತು.  ಮಹಾ ಮಂಗಳಾರತಿ ಮಾಡಿ  ಭಕ್ತರಿಗೆ ಗಂಧೋದಕ ವಿತರಿಸಲಾಯಿತು. ಪಟ್ಟಣದ ಎಂ.ಪಿ.ಶಾಂತಕುಮಾರ್ ಕುಟುಂಬಸ್ಥರು  ಸೇವಾಕರ್ತರಾಗಿದ್ದು, ಪೂಜಾ ನೇತೃತ್ವವನ್ನು ಎಸ್.ಎಸ್.ವಿಮಲ್ ಕುಮಾರ್ ತಂಡದವರು ನಿರ್ವಹಿಸಿದರು.

ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿರುವ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ಅರಿಸಿನ ಅಭಿಷೇಕ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT