ADVERTISEMENT

₹1 ಸಾವಿರಕ್ಕೆ 20 ಶರ್ಟ್ | ಮುಗಿಬಿದ್ದ ಜನ, ಹಾಸನದಲ್ಲಿ ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 23:35 IST
Last Updated 28 ಸೆಪ್ಟೆಂಬರ್ 2025, 23:35 IST
ಹಾಸನದ ಉದಯಗಿರಿಯ ಬಟ್ಟೆ ಅಂಗಡಿಯ ಎದುರು ಸೇರಿದ್ದ ಜನರನ್ನು ಪೊಲೀಸರು ಚದುರಿಸಿದರು
ಹಾಸನದ ಉದಯಗಿರಿಯ ಬಟ್ಟೆ ಅಂಗಡಿಯ ಎದುರು ಸೇರಿದ್ದ ಜನರನ್ನು ಪೊಲೀಸರು ಚದುರಿಸಿದರು   

ಹಾಸನ: ಇಲ್ಲಿನ ಉದಯಗಿರಿ ಬಡಾವಣೆಯ ಅಂಗಡಿಯೊಂದರಲ್ಲಿ ₹ 1ಸಾವಿರಕ್ಕೆ 20 ಶರ್ಟ್ ಎಂಬ ಘೋಷಣೆ ಗಮನಿಸಿ ಅಪಾರ ಜನರು ಅಂಗಡಿ ಮುಂದೆ ಸೇರಿದ್ದರು. ನೂಕುನುಗ್ಗಲು ಉಂಟಾಗಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಚದುರಿಸಿದರು.

ಶರ್ಟ್‌ ಮಾರಾಟ ಕುರಿತು ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್‌ ಸಾಕಷ್ಟು ಹರಿದಾಡಿತ್ತು. ಅದನ್ನು ನೋಡಿ ಸಾವಿರಾರು ಜನರು ಅಂಗಡಿಯತ್ತ ಬಂದಿದ್ದರು. ಬೆಳಿಗ್ಗೆಯಿಂದಲೇ ರಸ್ತೆಯಲ್ಲಿ ಜನಸಮೂಹ ಹೆಚ್ಚಾಗಿದ್ದು, ಖರೀದಿಗಾಗಿ ಜನರು ಸಾಲುಗಟ್ಟಿ ನಿಂತಿದ್ದರು.

ಜನಸಮೂಹವನ್ನು ನಿಯಂತ್ರಿಸಲು ಅಧಿಕಾರಿಗಳು ಪ್ರಯತ್ನಿಸಿದರು. ಜನರು ಹಿಂದೆ ಸರಿಯದಿದ್ದಾಗ ಲಘು ಲಾಠಿ ಪ್ರಹಾರ ಮಾಡಿದರು.  

ADVERTISEMENT

‘ಜನರು ನಿರೀಕ್ಷೆಗೂ ಮೀರಿ ಬಂದಿದ್ದರು. ಗೊಂದಲವಾಗದಂತೆ ನೋಡಿಕೊಳ್ಳಲು ಲಾಠಿ ಬೀಸಬೇಕಾಯಿತು. ಯಾರೂ ಗಾಯಗೊಂಡಿಲ್ಲ’ ಎಂದು ಪೊಲೀಸರು ತಿಳಿಸಿದರು.

ಹಾಸನದ ಉದಯಗಿರಿಯ ಬಟ್ಟೆ ಅಂಗಡಿಯ ಎದುರು ಖರೀದಿಗೆ ನಿಂತಿದ್ದ ಜನರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.