
ನುಗ್ಗೇಹಳ್ಳಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಸಚಿವರು ಹಾಲಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಸಮಾಜಕ್ಕೆ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಪರಮೇಶ್ ತಿಳಿಸಿದರು.
ಹೋಬಳಿ ಕೇಂದ್ರದ ಪೊಲೀಸ್ ಠಾಣೆ ಮುಂಭಾಗ ಹೋಬಳಿ ವೀರಶೈವ ಸಮಾಜ ಹಾಗೂ ಗ್ರಾಮಸ್ಥರು ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಶಾಮನೂರು ಶಿವಶಂಕರಪ್ಪನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ವೀರಶೈವ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಎಂ.ಎಸ್.ಸುರೇಶ್ ಮಾತನಾಡಿ, ‘ಶಾಮನೂರು ಶಿವಶಂಕರಪ್ಪನವರು ರಾಜ್ಯದಲ್ಲಿ ವೀರಶೈವ ಮಹಾಸಭಾ ಗಟ್ಟಿಯಾಗಿ ನಿಲ್ಲಲು ಹೆಚ್ಚು ಶ್ರಮವಹಿಸಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡಿದ್ದಾರೆ’ ಎಂದರು.
ತಾಲ್ಲೂಕು ಟಿಎಪಿಎಂಎಸ್ ನಿರ್ದೇಶಕ ತೋಟಿ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಕೃಪಾ ಶಂಕರ್, ಸಮಾಜದ ಹಿರಿಯರಾದ ಎನ್‌ಟಿ ಸಿದ್ದಪ್ಪ, ವೀರಶೈವ ಸಮಾಜದ ಹೋಬಳಿ ಅಧ್ಯಕ್ಷ ಎನ್ಎಸ್ ಗಿರೀಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್, ಪ್ರಮುಖರಾದ ಎನ್.ಸಿ. ವಿಶ್ವನಾಥ್, ಹೋಟೆಲ್ ರಾಜಣ್ಣ, ಎನ್.ಸಿ. ಕುಮಾರಸ್ವಾಮಿ, ದೊಡ್ಡೇಗೌಡ, ಎನ್.ಎನ್. ಮನು, ಜಯ ಕೀರ್ತಿ, ಎನ್‌ಬಿ ಉಮೇಶ್, ಎಂ.ಪಿ. ದಯಾನಂದ್, ಗಣೇಶ್, ತೋಟಿ ಮಂಜು, ಎನ್.ಸಿ. ನಟೇಶ್, ಪೊಲೀಸ್ ನಾರಾಯಣಗೌಡ, ಮರಿ ಶೆಟ್ಟಿಹಳ್ಳಿ ಸತೀಶ್, ತಾವರೆಕೆರೆ ಮಂಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.