ADVERTISEMENT

ಹುಟ್ಟೂರ ಕೆರೆಯಲ್ಲಿ ಭೈರಪ್ಪ ಚಿತಾಭಸ್ಮ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 15:59 IST
Last Updated 28 ಸೆಪ್ಟೆಂಬರ್ 2025, 15:59 IST
ಸಂತೇಶಿವರದ ಕೆರೆಯಲ್ಲಿ ಭಾನುವಾರ ಭೈರಪ್ಪ ಅವರ ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರ್‌ ತೆಪ್ಪದಲ್ಲಿ ತೆರಳಿ ಚಿತಾಭಸ್ಮ ವಿಸರ್ಜಿಸಿದರು
ಸಂತೇಶಿವರದ ಕೆರೆಯಲ್ಲಿ ಭಾನುವಾರ ಭೈರಪ್ಪ ಅವರ ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರ್‌ ತೆಪ್ಪದಲ್ಲಿ ತೆರಳಿ ಚಿತಾಭಸ್ಮ ವಿಸರ್ಜಿಸಿದರು   

ನುಗ್ಗೇಹಳ್ಳಿ (ಹಾಸನ ಜಿಲ್ಲೆ): ಸಾಹಿತಿ ಎಸ್.ಎಲ್. ಭೈರಪ್ಪ ಅವರ ಚಿತಾಭಸ್ಮವನ್ನು, ಅವರ ಆಸೆಯಂತೆ ಹುಟ್ಟೂರಿನ ಸಂತೇಶಿವರ ಕೆರೆಯಲ್ಲಿ ಪುತ್ರರಾದ ರವಿಶಂಕರ್ ಹಾಗೂ ಉದಯಶಂಕರ್ ಭಾನುವಾರ ವಿಸರ್ಜಿಸಿದರು.

ಶನಿವಾರ ಕಾವೇರಿ ನದಿಯಲ್ಲಿ ಸಂಪ್ರದಾಯದಂತೆ ಅಸ್ಥಿ ವಿಸರ್ಜನೆ ಮಾಡಿದ್ದ ಪುತ್ರರು, ಭೈರಪ್ಪನವರ ಕನಸಿನ ಯೋಜನೆಯಿಂದ ತುಂಬಿರುವ ಗ್ರಾಮದ ಕೆರೆಯಲ್ಲಿ ಗ್ರಾಮಸ್ಥರೊಂದಿಗೆ ಸೇರಿ ತೆಪ್ಪದಲ್ಲಿ ತೆರಳಿ ಅಸ್ಥಿ ವಿಸರ್ಜನೆ ನೆರವೇರಿಸಿದರು.

ಪುರೋಹಿತರಾದ ಪ್ರಭಾಕರ್ ಜೋಯಿಸ್, ಅನಂತರಾಮ ಜೋಯಿಸ್, ವೇಣುಗೋಪಾಲ್, ಎಸ್.ಡಿ. ನಾಗರಾಜ್ ರಾವ್ ಬ್ರಾಹ್ಮಣ ಸಂಪ್ರದಾಯದಂತೆ ಚಿತಾಭಸ್ಮಕ್ಕೆ ಪೂಜೆ ಸಲ್ಲಿಸಿದರು. ನಂತರ ಮಂತ್ರ, ವೇದ ಘೋಷ, ಶಾಂತಿ ಮಂತ್ರಗಳನ್ನು ಪಠಿಸಲಾಯಿತು.

ADVERTISEMENT

ಚಿತಾಭಸ್ಮ ತಂದ ಉದಯಶಂಕರ್ ಅವರನ್ನು ಗ್ರಾಮಸ್ಥರು, ಪ್ರವೇಶದ್ವಾರದಲ್ಲೇ ಬರಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.