ಹೊಳೆನರಸೀಪುರ: ಕೃಷ್ಣಜನ್ಮಾಷ್ಟಮಿ ಅಂಗವಾಗಿ ಕೋಟೆ ಲಕ್ಷ್ಮೀನರಸಿಂಹ ದೇವಾಲಯ ಬೀದಿಯಲ್ಲಿರುವ ಯಾದವ ಜನಾಂಗದ ಕೊಳಲು ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಸುಪ್ರಭಾತ ಸೇವೆ, ಪಂಚಾಮೃತಾಭಿಷೇಕ ಮತ್ತು ಬೆಣ್ಣೆ ಅಲಂಕಾರ ಮಾಡಿ ಪೂಜಿಸಲಾಯಿತು.
ಬೆಳಿಗ್ಗೆ 10 ಗಂಟೆಗೆ ಮಹಿಳಾ ಹರಿದಾಸ ಸಂಘದವರಿಂದ ದೇವರನಾಮ, 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ಯಾದವ ಮುಖಂಡರಾದ ಸುದರ್ಶನ್ (ಹರ್ಷ), ನಾರಾಯಣ, ಗೋಪಿನಾಥ್, ಗಾರೆ ಬಸವರಾಜು, ಕುಸುಮಾ, ಗೋವಿಂದರಾಜು, ನಾಗರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅರ್ಚಕರಾದ ರಾಮಸ್ವಾಮಿ ಭಟ್ಟರು, ವೆಂಕಟನರಸಿಂಹನ್, ರಾಮು, ಪೂಜಾ ವಿಧಿ ವಿಧಾನಗಳನ್ನು ನಡೆಸಿದರು. ಸಂಜೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಿ, ಉತ್ಸವ ಸಾಗುವ ಮಾರ್ಗದುದ್ದಕ್ಕೂ ಭಕ್ತರಿಗೆ ಹಾಲನ್ನು ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.