ADVERTISEMENT

ಜೋಡೆತ್ತಿನ ಗಾಡಿ ಓಟದ ಸ್ಫರ್ಧೆ; ಅಲ್ಲಾ ಪಟ್ಟಣ ಚಂದ್ರು ಎತ್ತಿಗೆ ಪ್ರಥಮ ಬಹುಮಾನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 12:43 IST
Last Updated 25 ಜನವರಿ 2025, 12:43 IST
ಅರಕಲಗೂಡು ತಾಲ್ಲೂಕು ಮರವಳಲು ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಜೋಡೆತ್ತಿನ ಗಾಡಿ ಸ್ಫರ್ಧೆಯ ವಿಜೇತರಿಗೆ ಶಾಸಕ ಎ. ಮಂಜು ಬಹುಮಾನ ವಿತರಿಸಿದರು
ಅರಕಲಗೂಡು ತಾಲ್ಲೂಕು ಮರವಳಲು ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಜೋಡೆತ್ತಿನ ಗಾಡಿ ಸ್ಫರ್ಧೆಯ ವಿಜೇತರಿಗೆ ಶಾಸಕ ಎ. ಮಂಜು ಬಹುಮಾನ ವಿತರಿಸಿದರು   

ಅರಕಲಗೂಡು: ತಾಲ್ಲೂಕಿನ ಮರವಳಲು ಗ್ರಾಮದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಫರ್ಧೆಯಲ್ಲಿ ಅಲ್ಲಾ ಪಟ್ಟಣ ಗ್ರಾಮದ ಚಂದ್ರು ಅವರ ಎತ್ತಿನ ಜೋಡಿ ಪ್ರಥಮ ಬಹುಮಾನ ₹50 ಸಾವಿರ ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ದ್ವಿತೀಯ ಬಹುಮಾನ ₹30 ಸಾವಿರವನ್ನು ಕಾರ್ಗಲ್ ಗ್ರಾಮದ ಮಂಜುನಾಥ್, ತೃತೀಯ ಬಹುಮಾನ ₹20 ಸಾವಿರ, ಟ್ರೋಫಿಯನ್ನು ಮರವಳಲು ಗ್ರಾಮದ ಮೋಹನ್ ಪಡೆದುಕೊಂಡರು.

ನಾಲ್ಕನೆ ಬಹುಮಾನ ₹10 ಸಾವಿರ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ಸ್ಫರ್ಧಿ ಹಾಗೂ 5ನೇ ಬಹುಮಾನ ₹5 ಸಾವಿರ ಮತ್ತು ಟ್ರೋಫಿಯನ್ನು ಕೆರೆಕೋಡಿ ಗ್ರಾಮದ ರಘು ಪಡೆದುಕೊಂಡರು.

ADVERTISEMENT

ಶುಕ್ರವಾರ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಶಾಸಕ ಎ. ಮಂಜು ಬಹುಮಾನ ವಿತರಿಸಿದರು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎಸ್. ಯೋಗೇಶ್, ಜೆಡಿಎಸ್ ಮುಖಂಡ ಗಾಂಧಿನಗರ ದಿವಾಕರಗೌಡ, ಜೆಡಿಎಸ್ ಕಸಬಾ ಹೋಬಳಿ ಅಧ್ಯಕ್ಷ ಶ್ರೀನಿವಾಸ್, ಉದ್ಯಮಿಗಳಾದ ಹನುಮೇಗೌಡ, ಹರೀಶ್ ಕುಮಾರ್ ಉಪಸ್ಥಿತರಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳ 40 ಜೊತೆ ಎತ್ತುಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.