ADVERTISEMENT

ವಿದ್ಯಾರ್ಥಿನಿಗೆ ಗಾಯ: ನಗರಸಭೆ ಅಧ್ಯಕ್ಷ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 15:43 IST
Last Updated 30 ಅಕ್ಟೋಬರ್ 2024, 15:43 IST
ಅರಸೀಕೆರೆ: ಚರಂಡಿ ಸ್ಲಾಬ್ ನಿಂದ ಎಡವಿ ಗಾಯಗೊಂಡಿದ್ದ ವಿದ್ಯಾರ್ಥಿನಿಯ ಆರೋಗ್ಯವನ್ನು ನಗರಸಭೆ ಆಡಳಿತದಿಂದ ವಿಚಾರಿಸಲಾಯಿತು.
ಅರಸೀಕೆರೆ: ಚರಂಡಿ ಸ್ಲಾಬ್ ನಿಂದ ಎಡವಿ ಗಾಯಗೊಂಡಿದ್ದ ವಿದ್ಯಾರ್ಥಿನಿಯ ಆರೋಗ್ಯವನ್ನು ನಗರಸಭೆ ಆಡಳಿತದಿಂದ ವಿಚಾರಿಸಲಾಯಿತು.   

ಅರಸೀಕೆರೆ: ಚರಂಡಿ ಮೇಲಿನ ಮುರಿದ ಸ್ಲ್ಯಾಬ್‌ನಿಂದ ಎಡವಿ ಬಿದ್ದು ಗಾಯಗೊಂಡ ನಗರದ ಹೊಯ್ಸಳೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಚಂದ್ರಿಕಾ ಅವರ ಕಾಳನಕೊಪ್ಪಲಿನ ಮನೆಗೆ ನಗರಸಭೆ ಅಧ್ಯಕ್ಷ ಸಮೀವುಲ್ಲಾ ಹಾಗೂ ಉಪಾಧ್ಯಕ್ಷ ಮನೋಹರ್ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಬಿ.ಎಚ್. ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು ಎರಡು ಬದಿಯ ಚರಂಡಿಗಳು ಹೆದ್ದಾರಿ ಇಲಾಖೆಗೆ ಸೇರಿದೆ. ಚರಂಡಿ ಮೇಲಿನ ಅನೇಕ ಸ್ಲಾಬ್‌ಗಳು ಮುರಿದಿದ್ದು ಹಲವು ಬಾರಿ ಹೆದ್ದಾರಿ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಹೇಳಿದ್ದೇನೆ. ಆದರೆ ಅನುದಾನದ ಕೊರತೆಯಿಂದ ಸರಿಪಡಿಸಿಲ್ಲ ಎಂದು ಸಮೀವುಲ್ಲಾ ಹೇಳಿದರು.

ಈಗಾಗಲೇ ಎರಡು ಪತ್ರ ಬರೆದು ಚರಂಡಿ ನಿರ್ವಹಣೆ ನಗರ ಸಭೆಗೆ ವಹಿಸಿಕೊಡುವಂತೆ ಕೇಳಲಾಗಿದೆ. ಚರಂಡಿಯ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.