ಹಾಸನ: ‘ನಟ ವಿಷ್ಣುವರ್ಧನ್ ಸ್ಮಾರಕಕ್ಕೆ ಭೂಮಿ ಖರೀದಿಸಿದ್ದು ನಟ ಸುದೀಪ್ ಅವರ ಔದಾರ್ಯವನ್ನು ತೋರಿಸಿದೆ’ ಎಂದು ನಟಿ ರಾಗಿಣಿ ದ್ವಿವೇದಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಟ ವಿಷ್ಣುವರ್ಧನ್ ಕುಟುಂಬದ ಜೊತೆ ನಿಕಟ ಸಂಬಂಧ ಹೊಂದಿರುವ ಸುದೀಪ್ ಅವರದ್ದು ಉತ್ತಮ ನಡೆ’ ಎಂದರು.
ನಟ ದರ್ಶನ್ ಕುರಿತು ಪ್ರತಿಕ್ರಿಯಿಸಿ, ‘ನನ್ನ ಜೀವನದಲ್ಲಿ ಸಾಕಷ್ಟು ಅನುಭವಿಸಿದ್ದೇನೆ. ನ್ಯಾಯಾಂಗ ವ್ಯವಸ್ಥೆ ಬಗ್ಗೆ ಅಪಾರ ನಂಬಿಕೆ ಇದೆ. ಪ್ರಕ್ರಿಯೆ ವಿಳಂಬವಾಗಬಹುದು. ನ್ಯಾಯ ಸಿಕ್ಕೇ ಸಿಗುತ್ತದೆ’ ಎಂದರು.
‘ಕಮೆಂಟ್ ಬಾಕ್ಸ್ ಸ್ವಚ್ಛ ಭಾರತ್ ಆಗಿದೆ’ ಎಂಬ ನಟಿ ರಮ್ಯಾ ಹೇಳಿಕೆ ಕುರಿತು, ‘ರಮ್ಯಾ ವಿಚಾರವಷ್ಟೇ ಅಲ್ಲ, ಪ್ರತಿಯೊಬ್ಬ ಮಹಿಳೆಗೂ ಹೀಗೇ ಆಗುತ್ತಿದೆ. ಮಹಿಳೆಯರು ಸುಲಭವಾಗಿ ಗುರಿಯಾಗುತ್ತಾರೆ. ಹಾಗೆ ಮಾಡುವುದು ತಪ್ಪು’ ಎಂದರು.
‘ನಿಮ್ಮ ಹತ್ತಿರ ತುಂಬಾ ಸಮಯವಿದೆ. ನಮ್ಮ ಹತ್ತಿರ ಇಲ್ಲ. ಸಮಯ ವ್ಯರ್ಥ ಮಾಡಿಕೊಂಡು ಕಮೆಂಟ್ ಮಾಡುವ ಬದಲು, ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯದಕ್ಕೆ ಬಳಸಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.