ADVERTISEMENT

'ಸೋಂಕಿತರಿಗೆ ಔಷಧ, ಆಮ್ಲಜನಕ ಪೂರೈಸಿ'

ಸಿಐಟಿಯು, ಕೆ.ಪಿ.ಆರ್‌.ಎಸ್‌ ವತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮೇ 2021, 14:40 IST
Last Updated 21 ಮೇ 2021, 14:40 IST
ಹಾಸನದ ಶ್ರಮ ಕಚೇರಿಯಲ್ಲಿ ಸಿಐಟಿಯು ಮತ್ತು ಕೆಪಿಆರ್‌ಎಸ್‌ ಸಂಘಟನೆ ವತಿಯಂದ ಪ್ರತಿಭಟನೆನಡೆಸಲಾಯಿತು
ಹಾಸನದ ಶ್ರಮ ಕಚೇರಿಯಲ್ಲಿ ಸಿಐಟಿಯು ಮತ್ತು ಕೆಪಿಆರ್‌ಎಸ್‌ ಸಂಘಟನೆ ವತಿಯಂದ ಪ್ರತಿಭಟನೆನಡೆಸಲಾಯಿತು   

ಹಾಸನ: ಕೋವಿಡ್ ಲಸಿಕೆಯನ್ನು ಉಚಿತವಾಗಿ ನೀಡಬೇಕು ಹಾಗೂ ಕೊರೊನಾ ಸೋಂಕಿತರಿಗೆ ಸಮಾರೋಪಾದಿಯಲ್ಲಿ ಔಷಧಿ, ಅಮ್ಲಜನಕ ಸೇರಿದ ಅಗತ್ಯ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿ ನಗರದ ಶ್ರಮ ಕಚೇರಿಯಲ್ಲಿ ಸಿಐಟಿಯು ಮತ್ತು ಕೆಪಿಆರ್‌ಎಸ್‌ ಸಂಘಟನೆ ವತಿಯಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

ಎಲ್ಲಾ ಅಸಂಘಟಿತ ಕಾರ್ಮಿಕರು ಹಾಗೂ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವ ಕುಟುಂಬಗಳಿಗೆ ಮೂರು ತಿಂಗಳು ₹10 ಸಾವಿರ ಸಹಾಯ ಧನ ನೀಡಬೇಕು. ತಲಾ 10 ಕೆ.ಜಿ. ಯಂತೆ 6 ತಿಂಗಳುಆಹಾರ ಧಾನ್ಯ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ರೈತ ವಿರೋಧಿ ಕಾಯ್ದೆಗಳನ್ನು ಕೈಬಿಟ್ಟು ಕೃಷಿ ಉತ್ಪನ್ನಗಳಿಗೆ ಸಮರ್ಪಕವಾದ ಮಾರುಕಟ್ಟೆ, ವೈಜ್ಞಾನಿಕ ಬೆಂಬಲ ಬೆಲೆ ಮತ್ತು ಬೆಳೆ ಪರಿಹಾರ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ200 ಕೆಲಸದ ದಿನಗಳಿಗೆ ಕೂಲಿಯನ್ನು ₹700 ಕ್ಕೆ ಹೆಚ್ಚಿಸಿ ನಗರ ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತರು, ಪೌರಕಾರ್ಮಿಕರು ಸೇರಿದಂತೆ ಎಲ್ಲಾ ಕೋವಿಡ್ ವಾರಿಯರ್ಸ್ ಗಳಿಗೆ ಸುರಕ್ಷಾ ವಿಮೆ ನೀಡಬೇಕು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಕಾರ್ಯದರ್ಶಿ ಅರವಿಂದ, ಪ್ರಕಾಶ್, ಜಯಂತಿ ಮತ್ತು ಕೆ.ಪಿ.ಆರ್.ಎಸ್ ಜಿಲ್ಲಾಧ್ಯಕ್ಷ ಎಚ್.ಆರ್. ನವೀನ್ ಕುಮಾರ್, ಎಸ್.ಎಫ್.ಐ ಜಿಲ್ಲಾಧ್ಯಕ್ಷೆ ಆಶಾ, ರಕ್ಷಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.