ಹಾಸನ: ಚುನಾವಣೆ ವೇಳೆ ಸಂಸದ ಶ್ರೇಯಸ್ ಪಟೇಲ್ ಆಸ್ತಿ ವಿವರ ಮರೆಮಾಚಿದ್ದಾರೆ ಎಂಬ ಪ್ರಕರಣಕ್ಕೆ ಅ.6ರಂದು ವಿಚಾರಣೆಗೆ ಹಾಜರಾಗುವಂತೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
‘ತಾತ, ಮಾಜಿ ಸಂಸದ ಜಿ.ಪುಟ್ಟಸ್ವಾಮಿ ಗೌಡರ ಹೆಸರಿನಲ್ಲಿ, ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಇದ್ದು, ಆಸ್ತಿವಿವರದಲ್ಲಿ ಉಲ್ಲೇಖಿಸಿಲ್ಲ’ ಎಂಬುದು ವಕೀಲರ ಆರೋಪ.
ಶುಕ್ರವಾರ ಇಲ್ಲಿನ ಸಂಸದರ ಕಚೇರಿಗೆ ನೋಟಿಸ್ ಅಂಟಿಸಿದ ವಕೀಲ ಪೂರ್ಣಚಂದ್ರ ತೇಜಸ್ವಿ,ಬಳಿಕ ಪಾಲಿಕೆ ಆವರಣದಲ್ಲಿ ನೋಟಿಸ್ ನೀಡಲು ಮುಂದಾದಾಗ, ‘ನೀವು ಅಮೀನರೇ’ ಎಂದು ಪ್ರಶ್ನಿಸಿದ ಸಂಸದರು ಅದನ್ನು ಪಡೆಯದೇ ಮುಂದೆ ನಡೆದರು.
ಸಿಟ್ಟಾದ ವಕೀಲರು, ‘ಕೋರ್ಟ್ ಸೂಚನೆಯಂತೆ ಬಂದಿದ್ದೇನೆ. ಯುವ ಸಂಸದರಾಗಿ ಕಾನೂನಿಗೆ ಗೌರವ ಕೊಡಬೇಕು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಂತರ ಸಂಸದರು, ‘ಈ ಬಗ್ಗೆ ಕಾನೂನು ಪ್ರಕಾರ ಹೋರಾಟ ನಡೆಯಲಿದೆ. ನೋಟಿಸ್ ಜಾರಿಯಾಗಿದ್ದರೆ, ಕಚೇರಿಯಲ್ಲಿ ಕೊಡಬೇಕು ಅಥವಾ ಅಮೀನರ ಮೂಲಕವೇ ನೀಡಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.