ADVERTISEMENT

ಚನ್ನರಾಯಪಟ್ಟಣ | ರೌಡಿಶೀಟರ್ ಚೇತು ಜಾಮೀನು ರದ್ದು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:54 IST
Last Updated 30 ಆಗಸ್ಟ್ 2025, 6:54 IST
<div class="paragraphs"><p>ಪ್ರಾಧಿನಿಧಿಕ ಚಿತ್ರ</p></div>

ಪ್ರಾಧಿನಿಧಿಕ ಚಿತ್ರ

   

ಐಸ್ಟಾಕ್ ಚಿತ್ರ

ಚನ್ನರಾಯಪಟ್ಟಣ: ರೌಡಿಶೀಟರ್, ಯಾಚೇನಹಳ್ಳಿ ಗ್ರಾಮದ ಚೇತು ಮತ್ತೆ ಜೈಲು ಸೇರಿದ್ದಾನೆ.

ADVERTISEMENT

2023ರ ಜುಲೈನಲ್ಲಿ ರೌಡಿಶೀಟರ್ ಮಾಸ್ತಿ ಕೊಲೆಯಾಗಿತ್ತು. ಈ ಪ್ರಕರಣದಲ್ಲಿ ಚೇತು ಸೇರಿ ಇತರೆ ಆರೋಪಿಗಳಿಗೆ ಚನ್ನರಾಯಪಟ್ಟಣದ ನ್ಯಾಯಾಲಯ 2024ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು.  ಇದನ್ನು ಪ್ರಶ್ನಿಸಿದ ಚೇತು, ತನ್ನ  ವಕೀಲರ ಮೂಲಕ  ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದ. ಅದನ್ನು ಮಾನ್ಯ ಮಾಡಿದ ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು, ಚೇತುಗೆ ಜಾಮೀನು ನೀಡಿತ್ತು.

ಹೈಕೋರ್ಟ್ ಆದೇಶದ ವಿರುದ್ದ ಚನ್ನರಾಯಪಟ್ಟಣ ಪೊಲೀಸರು, ಜಾಮೀನು ವಜಾ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಚೇತುಗೆ ನೀಡಿದ್ದ ಜಾಮೀನು ವಜಾ ಮಾಡಿ, 7 ದಿನದೊಳಗೆ ಶರಣಾಗುವಂತೆ ಕಳೆದ ವಾರ ಸೂಚಿಸಿತ್ತು. ಅದರಂತೆ ಚೇತು ಗುರುವಾರ ನ್ಯಾಯಾಲಯಕ್ಕೆ ಶರಣಾಗಿದ್ದು, ಮತ್ತೆ ಜೈಲು ಸೇರಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.