ADVERTISEMENT

ಒಂದು ಕೋಟಿ ಮನೆ ತಲುಪುವ ಸಂಕಲ್ಪ

ರಾಮಾಮೃತ ತರಂಗಿಣಿ ಪುಣ್ಯ ಜಲ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2021, 13:03 IST
Last Updated 27 ಮಾರ್ಚ್ 2021, 13:03 IST
ಚಂದ್ರಶೇಖರ್
ಚಂದ್ರಶೇಖರ್   

ಹಾಸನ: ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಅಂಗವಾಗಿ ರಾಮಾಮೃತ ತರಂಗಿಣಿ ಪುಣ್ಯ ಜಲ,
ಮೃತ್ತಿಕೆ (ಮಣ್ಣು) ಹಾಗೂ ರಾಮನ ಪಾದುಕೆ ಮಾರ್ಚ್‌ 28 ರಂದು ಹಾಸನಕ್ಕೆ ಬರಲಿದ್ದು, ಸಾರ್ವಜನಿಕರು
ಪೂಜೆ ಸಲ್ಲಿಸಬಹುದಾಗಿದೆ ಎಂದು ನಗರ ಬ್ರಾಹ್ಮಣ ಸಭಾ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

ರಾಮನ ಬಂಟ ಹನುಮನ ಜನ್ಮ ಸ್ಥಳವಾದ ಅಂಜನಾದ್ರಿ ಪರ್ವತದಲ್ಲಿ ವಿಶೇಷ ಪೂಜೆ ಮೂಲಕ ಯಾತ್ರೆ
ಆರಂಭವಾಗಿದ್ದು, ಒಂದು ಕೋಟಿ ಮನೆ ತಲುಪುವ ಸಂಕಲ್ಪ ಹಾಕಿಕೊಳ್ಳಲಾಗಿದೆ. ಭಾರತದ 16 ಪವಿತ್ರ ನದಿಗಳ
ಜಲ ಮತ್ತು ಮೃತ್ತಿಕೆಯನ್ನು ಯಾತ್ರೆ ಹೊಂದಿದೆ. ರಾಮ ಮಂದಿರಕ್ಕೆ ಪವಿತ್ರ ಜಲವನ್ನು ಹಾಗೂ ಮಣ್ಣನ್ನು
ಕಳುಹಿಸಿಕೊಡುವ ಸುವರ್ಣಾವಕಾಶವನ್ನು ಜಿಲ್ಲೆಗೆ ಜನತೆಗೆ ಕಲ್ಪಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ
ಹೇಳಿದರು.

28ರ ಸಂಜೆ 4 ಗಂಟೆಗೆ ರಥ ತಣ್ಣೀರುಹಳ್ಳ ಪ್ರವೇಶಿಸಲಿದ್ದು, 29ರಂದು ಉತ್ತರ ಬಡಾವಣೆ, ಸರಸ್ವತಿಪುರಂ,
ರಂಗೋಲಿಹಳ್ಳ, ಅಗ್ರಹಾರ ಬೀದಿಯಲ್ಲಿ ಸಂಚರಿಸಲಿದೆ. ಸಂಜೆ 6 ಗಂಟೆಗೆ ಸೀತಾರಾಮಂಜನೇಯ
ದೇವಸ್ಥಾನದಲ್ಲಿ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ. ನಂತರ ಬೆಂಗಳೂರಿನ ವಿದ್ವಾನ್ ಬಿ.ಕೆ.
ಅನಂತರಾಮ್ ಮತ್ತು ತಂಡದಿಂದ ಕೊಳಲುವಾದನ ಕಾರ್ಯಕ್ರಮ ಇರಲಿದೆ. 30ರ ಬೆಳಿಗ್ಗೆಯಿಂದ ಸಂಜೆ
ವರೆಗೆ ನಗರದ ವಿವಿಧ ಬಡಾವಣೆಗಳಲ್ಲಿ ರಥ ಸಂಚಾರ ನಡೆಸಲಿದೆ. ಪುಣ್ಯ ಕಾರ್ಯದಲ್ಲಿ ನಗರದ ಎಲ್ಲರೂ
ಭಾಗವಹಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ರಾಮಾಮೃತ ತರಂಗಿಣಿ ಸಮಿತಿ ಸಂಚಾಲಕ ಎಸ್.ಕೆ. ವೇಣುಗೋಪಾಲ್, ಅಖಿಲ ಭಾರತ ವೀರಶೈವ
ಮಹಾಸಭಾ ತಾಲ್ಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.