ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ರೈತ ಸಂಪರ್ಕ ಕೇಂದ್ರದ ಕಿಟಕಿ ಸರಳು ಮುರಿದು ₹ 1.5 ಲಕ್ಷ ಬೆಲೆಬಾಳುವ ಬಿತ್ತನೆ ಬೀಜ ಮತ್ತು ಸಸ್ಯ ಸಂರಕ್ಷಣಾ ಔಷಧಿಗಳನ್ನು ಕಳವು ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ಬೆಳಿಗ್ಗೆ ಸಿಬ್ಬಂದಿ ಕಚೇರಿ ಬಾಗಿಲು ತೆರೆದು ನೋಡಿದ ವೇಳೆ ಕಳವು ನಡೆದಿರುವುದು ಗೊತ್ತಾಗಿದೆ. 148 ಕೆ.ಜಿ. ಬಿತ್ತನೆ ಮುಸುಕಿನ ಜೋಳ, 68 ಕೆ.ಜಿ. ವಿವಿದ ಸಸ್ಯಸಂರಕ್ಷಣಾ ಔಷಧಿಗಳನ್ನು ಕಳವು ಮಾಡಲಾಗಿದೆ. ಹಾರೆ, ಗುದ್ದಲಿ ಮುಂತಾದ ಕೃಷಿ ಪರಿಕರಗಳನ್ನು ಕಚೇರಿ ಹೊರಗೆ ಎಸೆದು ದಾಂದಲೆ ನೆಡಿಸಿದ್ದಾರೆ. ಪೋಲಿಸರಿಗೆ ದೂರು ನೀಡಲಾಗಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಎಂದು ಸಹಾಯಕ ಕೃಷಿ ನಿರ್ದೇಶಕಿ ಕೆ.ಜಿ.ಕವಿತಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.