ADVERTISEMENT

ಲಂಡನ್‌ನಿಂದ ಬಂದ ಇಬ್ಬರ ಗಂಟಲು ದ್ರವ ಸಂಗ್ರಹ‌

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 12:33 IST
Last Updated 22 ಡಿಸೆಂಬರ್ 2020, 12:33 IST
ವಿಮಾನ ನಿಲ್ದಾಣಗಳಿಗೆ ಬಂದಿಳಿದ ಪ್ರಯಾಣಿಕರ ಪರೀಕ್ಷೆ ನಡೆಯುತ್ತಿರುವುದು
ವಿಮಾನ ನಿಲ್ದಾಣಗಳಿಗೆ ಬಂದಿಳಿದ ಪ್ರಯಾಣಿಕರ ಪರೀಕ್ಷೆ ನಡೆಯುತ್ತಿರುವುದು   

ಹಾಸನ: ಕೊರೊನಾ ವೈರಸ್‌ ಹೊಸ ಸ್ವರೂಪ ಕಾಣಿಸಿಕೊಂಡಿರುವ ಲಂಡ್‌ನಿಂದ ಜಿಲ್ಲೆಗೆ ಬಂದಿರುವ ಇಬ್ಬರ ಗಂಟಲು ಮತ್ತು‌ ಮೂಗಿನ ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದೆ.

29 ವರ್ಷದ ವಿಜ್ಞಾನಿ ಎಕ್ಸೆಟರ್‌ ಪ್ರದೇಶದಿಂದ ಹಾಸನ ತಾಲ್ಲೂಕಿಗೆ ಹಾಗೂ ಮತ್ತೊಬ್ಬರು 48 ವರ್ಷದ ಉದ್ಯೋಗಿ ಲಂಡನ್‌ನಿಂದ ಅರಕಲಗೂಡು ತಾಲ್ಲೂಕಿಗೆ ಬಂದಿದ್ದಾರೆ. ಇಬ್ಬರಿಗೂ ರೋಗದ ಲಕ್ಷಣ ಇಲ್ಲ. ಮಾರ್ಗಸೂಚಿ ಪ್ರಕಾರ ಇಬ್ಬರನ್ನೂ ಪ್ರತ್ಯೇಕವಾಗಿ ಇರಿಸಿ, ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT