
ಅರಕಲಗೂಡು: ಊಟದ ತಟ್ಟೆಯ ಮುಂದೆ ಕುಳಿತಾಗ ರೈತನಿಗೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯಬಾರದು ಎಂದು ಟೈಮ್ಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ. ಕೆ. ಗಂಗಾಧರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಟೈಮ್ಸ್ ಹಾಸನ ಪಿಯು ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಆಹಾರ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಹಾರವನ್ನು ಪೋಲುಮಾಡದೆ ಬಳಸಬೇಕು. ಆಹಾರವನ್ನು ಚೆಲ್ಲುವ ಮೊದಲು ಹಸಿದ ಹೊಟ್ಟೆಗಳ ನಮ್ಮ ಕಣ್ಣೆದುರು ಬರುವಂತಾಗಬೇಕು. ದೇಹಕ್ಕೆ ಶಕ್ತಿ ಚೈತನ್ಯವನ್ನು ನೀಡುವ ಆಹಾರದ ಮಹತ್ವ ಅರಿತು ಬಳಸುವುದು ಅಗತ್ಯ ಎಂದರು.
ಪ್ರಾಂಶುಪಾಲ ಪಿ. ನವೀನ್ ಉಲಿವಾಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯಾವಹಾರಿಕ ಜ್ಞಾನದ ಜತೆಗೆ ವ್ಯಾಪಾರ ಕೌಶಲ ಬೆಳೆಸುವ ಉದ್ದೇಶದಿಂದ ಆಹಾರಮೇಳವನ್ನು ಹಮ್ಮಿಕೊಳ್ಳಲಾಗಿದೆ, ವಿದ್ಯಾರ್ಥಿಗಳು ಇದರ ಪ್ರಯೋಜನ ಅರಿಯುವಂತೆ ಸಲಹೆ ನೀಡಿದರು.
‘14 ಸ್ಟಾಲ್‌ಗಳನ್ನು ತೆರದಿದ್ದ ವಿದ್ಯಾರ್ಥಿಗಳ ತಂಡ , ತಾವೇ ತಯಾರಿಸಿತಂದ ಹೈದರಾಬಾದ್ ಬಿರಿಯಾನಿ, ಶಾವಿಗೆ ,ಕಡುಬು, ಕೋಳಿ ಸಾರು , ನಿಪ್ಪಟ್ಟು, ಸಿಹಿತಿನಿಸುಗಳು, ಪಾನಿಪೂರಿ,ಬರ್ಗರ್ , ಪಾವ್ ಬಾಜಿ, ಬಜ್ಜಿ, ಐಸ್ ಕ್ರೀಂ, ಕಬಾಬ್, ಫಿಶ್ ಫ್ರೈ, ಪರೋಟ, ಜಾಮೂನು , ಹತ್ತು ಹಲವು ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯ ಹಾಗೂ ಚಾಟ್ಸ್ ಗಳನ್ನು ಮಾರಾಟಮಾಡಿದರು. ವಿದ್ಯಾರ್ಥಿಗಳು ಖಾದ್ಯಗಳನ್ನು ಪೋಷಕರೂ ಖರೀದಿಸಿ ಪ್ರೋತ್ಸಾಹಿಸಿದರು.
ದ್ವಿತೀಯ ಪಿಯು ವಿದ್ಯಾರ್ಥಿನಿಯರು ಸೀರೆ, ವಿದ್ಯಾರ್ಥಿಗಳು ಪಂಚೆ ಶಲ್ಯ ಧರಿಸುವ ಮೂಲಕ ಆಹಾರ ಮೇಳಕ್ಕೆ ಮೆರುಗು ನೀಡಿದರು. ₹50 ಸಾವಿರ ಬಂಡವಾಳ ತೊಡಗಿಸಿ ,₹70 ಸಾವಿರ ವಹಿವಾಟು ನಡೆಸಿ, ಕೌಶಲ ಮೆರೆದರು. ಮೂರು ತಂಡಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಉಪನ್ಯಾಸಕರಾದ ಕೃಷ್ಣಮೂರ್ತಿ , ಮಧು ಡಿ, ಪ್ರಜ್ವಲ್, ಉದಯ್ ಕುಮಾರ್, ನಂದೀಶ್, ರಾಕೇಶ್, ಅರ್ಪಿತಾ, ರಿಯಾನ, ರೇಷ್ಮಾ, ಅನುಶ್ರೀ, ಭೂಮಿಕಾ , ಚಂದ್ರಶೇಖರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.