ADVERTISEMENT

ಹಾಸನ: ಟಿಪ್ಪು ಜಯಂತಿ, ಸಿಹಿ ವಿತರಣೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2021, 16:11 IST
Last Updated 10 ನವೆಂಬರ್ 2021, 16:11 IST
ಹಾಸನ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲಾಯಿತು. ಮುಖಂಡರಾದ ಮಂಜೇಗೌಡ, ಮಹೇಶ್, ವೆಂಕಟೇಶ್, ಪ್ರಕಾಶ್ ಇದ್ದಾರೆ
ಹಾಸನ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸಲಾಯಿತು. ಮುಖಂಡರಾದ ಮಂಜೇಗೌಡ, ಮಹೇಶ್, ವೆಂಕಟೇಶ್, ಪ್ರಕಾಶ್ ಇದ್ದಾರೆ   

ಹಾಸನ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಟಿಪ್ಪು ಸುಲ್ತಾನ್‌ 272ನೇ ಜಯಂತಿಯನ್ನು ಬುಧವಾರ
ಸರಳವಾಗಿ ಆಚರಿಸಲಾಯಿತು.

ಟಿಪ್ಪು ಸುಲ್ತಾನ್‌ ಭಾವಚಿತ್ರಕ್ಕೆ ಮುಖಂಡರು, ಕಾರ್ಯಕರ್ತರು ಪುಷ್ಪ ನಮನ ಸಲ್ಲಿಸಿ, ಸಿಹಿ ಹಂಚಿದರು.

ಕೆಪಿಸಿಸಿ ಸದಸ್ಯ ಎಚ್‌.ಕೆ.ಮಹೇಶ್ ಮಾತನಾಡಿ, ‘ಟಿಪ್ಪು ಸುಲ್ತಾನ್ ಕನ್ನಡದ ಅಭಿಮಾನಿ. ಹಿಂದೂ
ದೇವಾಲಯಗಳನ್ನು ಉಳಿಸಿದ ಕೀರ್ತಿ ಸಲ್ಲುತ್ತದೆ. ಬ್ರಿಟಿಷರ ವಿರುದ್ಧದ ಹೋರಾಟದ ವೇಳೆ ತಮ್ಮ ಮಕ್ಕಳನ್ನು ಬಲಿ ಕೊಟ್ಟರು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ಮುಖಂಡರಾದ ಎಚ್.ಕೆ.ಜವರೇಗೌಡ, ಅಬ್ದೂಲ್ ಸಮದ್, ಬಿ.ಪಿ.ಮಂಜೇಗೌಡ, ಮಹಮದ್ ಆರೀಫ್, ಶಿವಕುಮಾರ್, ವೆಂಕಟೇಶ್, ಅಶ್ರು, ಕಯಿಂ, ರಾಮಚಂದ್ರ, ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.