ADVERTISEMENT

ಚನ್ನರಾಯಪಟ್ಟಣ: ಪಾದಯಾತ್ರೆ ಹೊರಟ ಸಾರಿಗೆ ನೌಕರ

ಬೇಡಿಕೆ ಈಡೇರಿಸುವಂತೆ ಮುಖ್ಯಮಂತ್ರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 23:21 IST
Last Updated 7 ಏಪ್ರಿಲ್ 2021, 23:21 IST
ಚನ್ನರಾಯಪಟ್ಟಣದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿರುವ ಬಸ್ ನಿರ್ವಾಹಕ ಪ್ರದೀಪ್
ಚನ್ನರಾಯಪಟ್ಟಣದಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟಿರುವ ಬಸ್ ನಿರ್ವಾಹಕ ಪ್ರದೀಪ್   

ಚನ್ನರಾಯಪಟ್ಟಣ: ಸಾರಿಗೆ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಪಟ್ಟಣದ ಬಸ್ ನಿಲ್ದಾಣದಿಂದ ಸಾರಿಗೆ ನೌಕರರೊಬ್ಬರು ಏಕಾಂಗಿಯಾಗಿ ಪಾದಯಾತ್ರೆ ಹೊರಟಿರುವ ದೃಶ್ಯ ಈ ಭಾಗದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅರಕಲಗೂಡು ಘಟಕದಲ್ಲಿ ಚಾಲಕ/ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ, ತಾಲ್ಲೂಕಿನ ಕಾಂತರಾಜಪುರದ ನಿವಾಸಿ ಪ್ರದೀಪ್ ಅವರು ನೌಕರರ ಸಮಸ್ಯೆಗೆ ಸ್ಪಂದಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿರುವುದು ವಿಡಿಯೊದಲ್ಲಿದೆ.

‘ಮುಖ್ಯಮಂತ್ರಿ ಮನೆವರೆಗೆ ಪಾದಯಾತ್ರೆ ಹೋಗುತ್ತಿದ್ದೇನೆ. ಇದು ನನ್ನೊಬ್ಬನ ಪಾದಯಾತ್ರೆಯಲ್ಲ. ನಾಲ್ಕು ನಿಗಮಗಳ 1.30 ಲಕ್ಷ ನೌಕರರ ಪಾದಯಾತ್ರೆ. ದಯವಿಟ್ಟು ಸಹಕರಿಸಿ. ಸರ್ಕಾರಕ್ಕೆ, ನಮ್ಮ ಸಮಸ್ಯೆ ಮನದಟ್ಟಾಗಬೇಕು. ಹೀಗೆಯೇ ಬಿಟ್ಟರೆ ತಾರತಮ್ಯ ಮಾಡುತ್ತಾರೆ. ಈ ಹೋರಾಟ ಯಶಸ್ವಿಯಾಗಬೇಕು. ಮುಷ್ಕರವನ್ನು ಹೀಗೆಯೇ ಮುಂದುವರೆಸೋಣ. ಕಾರ್ಮಿಕರು ಈ ವಿಡಿಯೊ ಶೇರ್ ಮಾಡಬೇಕು’ ಎಂದು ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.