ಅರಸೀಕೆರೆ: ರೈತರು ಯೂರಿಯಾ ಖರೀದಿಗಾಗಿ ತಾಲ್ಲೂಕಿನ ಬಾಣಾವಾರದ ಕೃಷಿ ಪತ್ತಿನ ಸಹಕಾರ ಸಂಘದ ಹತ್ತಿರ ರೈತರು ರಾತ್ರಿಯಿಂದ ಜಮಾಯಿಸಿದ್ದು, ನೂಕುನುಗ್ಗಲು ಕಂಡುಬಂದಿತು.
ಸ್ಥಳಕ್ಕೆ ಭೇಟಿ ನೀಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ. ಶ್ರೀನಿವಾಸ್ ಮಾತನಾಡಿ, ‘ಬಾಣಾವಾರ ದೊಡ್ಡ ಹೋಬಳಿ ಕೇಂದ್ರ ಆಗಿರುವುದರಿಂದ ಹೆಚ್ಚಾಗಿ ಗೊಬ್ಬರದ ಕೊರತೆ ಕಾಡುತ್ತಿದೆ. ಎಲ್ಲ ರೈತರಿಗೂ ಯೂರಿಯಾ ಸಿಗಲಿದ್ದು, ಇದರಲ್ಲಿ ಗೊಂದಲ ಬೇಡ’ ಎಂದು ಹೇಳಿದರು.
‘ರೈತ ಸಂಪರ್ಕ ಕೇಂದ್ರ ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ್ ಗಮನಹರಿಸಿ ಹೆಚ್ಚಿನ ನಮ್ಮ ಸೊಸೈಟಿಗೆ ಯೂರಿಯ ಗೊಬ್ಬರವನ್ನು ಪೂರೈಸುತ್ತಿದ್ದಾರೆ. ರೈತರು ತಾಳ್ಮೆಯಿಂದ ಸರದಿ ಸಾಲಿನಲ್ಲಿ ಗೊಬ್ಬರವನ್ನು ಖರೀದಿಸಬೇಕು. ಈ ಸನ್ನಿವೇಶದಲ್ಲಿ ರೈತರಿಗೆ ಯೂರಿಯಾ ಅವಶ್ಯಕತೆ ಎದ್ದು ಕಾಣುತ್ತದೆ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರೈತರ ಸಂಕಷ್ಟ ಅರಿತು ಗೊಬ್ಬರ ಪೂರೈಕೆ ಮಾಡುವಲ್ಲಿ ಆದ್ಯತೆ ನೀಡಬೇಕು’ ಎಂದು ಹೇಳಿದರು.
ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಚಂದ್ರಪ್ಪ ಮಾತನಾಡಿ, ‘ನಮ್ಮ ಸೊಸೈಟಿಯಲ್ಲಿ ಪಾರದರ್ಶಕವಾಗಿ ಎಲ್ಲಾ ರೈತರಿಗೂ ಸಮರ್ಪಕವಾಗಿ ಯೂರಿಯಾ ಪೂರೈಸುವುದು ನಮ್ಮ ಕರ್ತವ್ಯ. ರೈತರು ತಳ್ಳಾಟ ನೂಕಾಟ ಮಾಡದೇ ಗೊಬ್ಬರ ಪಡೆಯಬೇಕು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.