ADVERTISEMENT

ಯಡಿಯೂರಪ್ಪ ಅವರನ್ನೇ ಮುಂದುವರೆಸಲು ಆಗ್ರಹ: ವೀರಶೈವ ಲಿಂಗಾಯತ ಯುವ ಸೇನೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 13:43 IST
Last Updated 22 ಜುಲೈ 2021, 13:43 IST
ಹಾಸನದ ಹೇಮಾವತಿ ಪ್ರತಿಮೆ ಎದುರು ವೀರಶೈವ ಲಿಂಗಾಯಿತ ಯುವ ಸೇನೆ ವತಿಯಿಂದಪ್ರತಿಭಟನೆ ನಡೆಸಲಾಯಿತು
ಹಾಸನದ ಹೇಮಾವತಿ ಪ್ರತಿಮೆ ಎದುರು ವೀರಶೈವ ಲಿಂಗಾಯಿತ ಯುವ ಸೇನೆ ವತಿಯಿಂದಪ್ರತಿಭಟನೆ ನಡೆಸಲಾಯಿತು   

ಹಾಸನ: ಬಿ.ಎಸ್‌.ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಯುವ ಸೇವೆ ವತಿಯಿಂದ ಗುರುವಾರ ಪ್ರತಿಭಟನೆನಡೆಸಲಾಯಿತು.

ಯುವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಅವಿನಾಶ್ ನೇತೃತ್ವದಲ್ಲಿ ನೂರಾರು ಮಂದಿ ನಗರದ ಹೇಮಾವತಿ
ಪ್ರತಿಮೆ ಬಳಿ ಪ್ರತಿಭಟನೆ ನಡೆಸಿ, ‘ಯಡಿಯೂರಪ್ಪ ಅವರನ್ನು ಉಳಿಸಿ’ ಎಂಬ ಘೋಷಣೆ
ಮೊಳಗಿಸಿದರು.

ರೈತ ನಾಯಕ ಹಾಗೂ ರಾಜ್ಯದಲ್ಲಿ ಬೇರು ಮಟ್ಟದಿಂದ ಬಿಜೆಪಿ ಕಟ್ಟಿ ಬೆಳಸಿ, ಅಧಿಕಾರಕ್ಕೆ ತಂದಂತಹ ನಾಯಕನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ನಡೆಸುತ್ತಿರುವಷಡ್ಯಂತ್ರವನ್ನು ನಿಲ್ಲಿಸಿ, ಅವಧಿ ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ADVERTISEMENT

ಇಳಿ ವಯಸ್ಸಿನಲ್ಲಿಯೂ 18 ಗಂಟೆ ತಾಸು ಕರ್ತವ್ಯ ನಿರ್ವಹಿಸುತ್ತಿದ್ದು, ಕೋವಿಡ್‌ ನಿರ್ವಹಣೆಯನ್ನುಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕಾದರೆ ಇವರ ಅವಶ್ಯಕತೆ ಇದೆ. ರಾಷ್ಟ್ರೀಯ ನಾಯಕರು ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯಡಿಯೂರಪ್ಪ ಅವರನ್ನು ಸಿ.ಎಂ ಸ್ಥಾನದಿಂದ ಇಳಿಸಿದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಯುವ ಸೇನೆ ಉಪಾಧ್ಯಕ್ಷರಾದಕೆ.ಬಿ.ನಾಗೇಶ್,ಎಚ್‌.ಕೆ.ಪ್ರದೀಪ್, ಸದಸ್ಯರಾದ ಜಿ.ಅವಿನಾಶ್ ಮತ್ತು ಎಸ್‌.ಮೋಹನ್ ಕುಮಾರ್, ವೀರೇಶ್, ರಾಜು, ದಿಲೀಪ್, ದರ್ಶನ್ ಮುಖಂಡರಾದ ಬಿ.ಆರ್‌.ವಸಂತ್ ಕುಮಾರ್, ಹೇಮೇಶ್‌, ಆಲೂರು ಹೇಮಂತ್‌, ಮೋಹನ್‌ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.