
ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಮಲಸವಾರದ ಬಿ.ಆರ್.ಎಸ್ಟೇಟ್‌ನ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ ಆಟೊರಿಕ್ಷಾ ಮೇಲೆ ಕಾಡುಕೋಣ ದಾಳಿ ನಡೆಸಿದ್ದು, ಆಟೊದಲ್ಲಿದ್ದ ಮಹಿಳೆ ಗಾಯಗೊಂಡಿದ್ದಾರೆ.
ಆಟೊ ಚಾಲಕ ಮಹಮ್ಮದ್ ಆಲಿ, ಮಲಸಾವರ ಗ್ರಾಮದಿಂದ ಅರೇಹಳ್ಳಿಗೆ ಪ್ರಯಾಣಿಕ ಮಹಿಳೆ ಪಲ್ಲವಿ ಅವರನ್ನು ಕರೆದುಕೊಂಡು ಹೋಗುವಾಗ ಕಾಡುಕೋಣ ಏಕಾಏಕಿ ದಾಳಿ ನಡೆಸಿದೆ. ಆಟೊವನ್ನು ರಸ್ತೆಯ ಬದಿಯ ಚರಂಡಿಗೆ ಎತ್ತಿ ಬಿಸಾಡಿದೆ. ಆಟೊರಿಕ್ಷಾ ಜಖಂಗೊಂಡು ಹಿಂಬದಿಯಲ್ಲಿ ಕುಳಿತಿದ್ದ ಪಲ್ಲವಿ ಅವರ ತಲೆ, ಕೈ, ಕಾಲು ಹಾಗೂ ದೇಹದ ಭಾಗಗಳಿಗೆ ಗಾಯಗಳಾಗಿವೆ. ಅರೇಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.