ADVERTISEMENT

ಬೇಲೂರು: ಕಾಡು ಹಂದಿಯಿಂದ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2025, 2:47 IST
Last Updated 7 ಆಗಸ್ಟ್ 2025, 2:47 IST
 ಕಾಡು ಹಂದಿಗಳು ನಾಶಪಡಿಸಿದ ತೆನೆಗಳನ್ನು ಪರ್ವತೇಗೌಡ ತೋರಿಸಿದರು 
 ಕಾಡು ಹಂದಿಗಳು ನಾಶಪಡಿಸಿದ ತೆನೆಗಳನ್ನು ಪರ್ವತೇಗೌಡ ತೋರಿಸಿದರು    

ಬೇಲೂರು: ಹೆಬ್ಬಾಳು ಗ್ರಾಮದ ಜಯದೇವಪ್ಪ ಮತ್ತು ಪರ್ವತೇಗೌಡ ಎಂಬವರಿಗೆ ಸೇರಿದ ಮುಸುಕಿನ ಜೋಳದ ಕಟಾವಿನ ಹಂತದ ಬೆಳೆಯನ್ನು ಮಂಗಳವಾರ ರಾತ್ರಿ ಕಾಡು ಹಂದಿಗಳು ನಾಶಪಡಿಸಿವೆ.

ರೈತರಾದ ಜಯದೇವಪ್ಪ ಹಾಗೂ ಪರ್ವತೇಗೌಡ ಮಾತನಾಡಿ, ‘25ಕ್ಕೂ ಹೆಚ್ಚು ಕಾಡು ಹಂದಿಗಳು ನುಗ್ಗಿ, ಜೋಳವನ್ನು ಅರೆ-ಬರೆ ತಿಂದು ಹೊಲವನ್ನು ಧ್ವಂಸ ಮಾಡಿವೆ. ನಮಗೆ ದಿಕ್ಕು ತೋಚದಂತಾಗಿದೆ. ಹಂದಿಗಳು ತಿಂದು ಬಿಟ್ಟ ಜೋಳದ ತೆನೆ ಮತ್ತು ಕಡ್ಡಿಯನ್ನು ಜಾನುವಾರುಗಳು ಕೂಡ ತಿನ್ನುವುದಿಲ್ಲ.   ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿ, ಪರಿಹಾರ ಕೊಡಿಸಲು ಕ್ರಮವಹಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT