ADVERTISEMENT

ಸಕಲೇಶಪುರ: ಸುಶೀಲಾ ಶಿವಪ್ಪ ಆರೋಗ್ಯ ವಿಚಾರಿಸಿದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 4:59 IST
Last Updated 20 ಸೆಪ್ಟೆಂಬರ್ 2022, 4:59 IST
ಸಕಲೇಶಪುರ ತಾಲ್ಲೂಕಿನ ಕುಂಬ್ರಳ್ಳಿಗೆ ಭೇಟಿ ನೀಡಿದ ಬಿ.ಎಸ್‌. ಯಡಿಯೂರಪ್ಪ ಅವರು ಸುಶೀಲಾ ಶಿವಪ್ಪ ಅವರ ಆರೋಗ್ಯ ವಿಚಾರಿಸಿದರು
ಸಕಲೇಶಪುರ ತಾಲ್ಲೂಕಿನ ಕುಂಬ್ರಳ್ಳಿಗೆ ಭೇಟಿ ನೀಡಿದ ಬಿ.ಎಸ್‌. ಯಡಿಯೂರಪ್ಪ ಅವರು ಸುಶೀಲಾ ಶಿವಪ್ಪ ಅವರ ಆರೋಗ್ಯ ವಿಚಾರಿಸಿದರು   

ಸಕಲೇಶಪುರ: ತಾಲ್ಲೂಕಿನ ಕುಂಬ್ರಳ್ಳಿಯಲ್ಲಿರುವ ಮಾಜಿ ಶಾಸಕ, ದಿವಂಗತ ಬಿ.ಬಿ. ಶಿವಪ್ಪ ಅವರ ಮನೆಗೆ ಬಿ.ಎಸ್‌. ಯಡಿಯೂರಪ್ಪ ಸೋಮವಾರ ಭೇಟಿ ನೀಡಿ, ಶಿವಪ್ಪನವರ ಪತ್ನಿ ಹಾಗೂ ರಾಜ್ಯ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಸುಶೀಲಾ ಶಿವಪ್ಪ ಅವರ ಆರೋಗ್ಯ ವಿಚಾರಿಸಿದರು.

ಅನಾರೋಗ್ಯದಿಂದ ಕೆಲವು ತಿಂಗಳಿಂದ ಹಾಸಿಗೆ ಹಿಡಿದಿರುವ ಸುಶೀಲಾ ಅವರೊಂದಿಗೆ 30 ನಿಮಿಷ ಕಾಲ ಕಳೆದ ಯಡಿಯೂರಪ್ಪ, ಆರೋಗ್ಯ ವಿಚಾರಿಸಿದರು. ತೀವ್ರ ಅಸ್ವಸ್ಥರಾಗಿರುವ ಸುಶೀಲಾ ಅವರು ಯಡಿಯೂರಪ್ಪ ಅವರ ಗುರುತು ಹಿಡಿದು, ಮುಗುಳು ನಗೆಯಿಂದ ಪ್ರತಿಕ್ರಿಯಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ಬಿ.ಬಿ. ಶಿವಪ್ಪ ಹಾಗೂ ನಾನೂ ಒಟ್ಟಿಗೆ ರಾಜಕಾರಣ ಮಾಡಿಕೊಂಡು ಬಂದವರು. ಸುಶೀಲಮ್ಮ ನಮಗೆ ತಾಯಿ ಪ್ರೀತಿ ನೀಡಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಬೇಗ ಚೇತರಿಸಿಕೊಳ್ಳಲಿ ಎಂದು ದೇವರನ್ನು ಬೇಡುತ್ತೇನೆ’ ಎಂದರು.

ADVERTISEMENT

ಶಾಸಕ ಪ್ರೀತಂ ಗೌಡ, ವಿಧಾನ ಪರಿಷತ್‌ ಸದಸ್ಯ ರವಿಕುಮಾರ್, ಮುಖಂಡಎಚ್‌.ಎಂ. ವಿಶ್ವನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.