
ಹಾಸನ: ಮಕ್ಕಳು ಓದಿನಲ್ಲಿ ಮುಂದುವರಿಯುವುದರ ಜೊತೆಗೆ ಸಮಾಜದ ಬಗ್ಗೆ ಕಳಕಳಿ ಬೆಳೆಸಿಕೊಳ್ಳಬೇಕು. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ನ್ಯಾಷನಲ್ ಯೂಥ್ ವಿಂಗ್ ಕೋ ಆರ್ಡಿನೇಟರ್ ಹುಸೇನ್ ಬೈಕಾಡಿ ಹೇಳಿದರು.
ನಗರ ಮಹಾರಾಜ ಪಾರ್ಕ್‌ನ ಓಂ ಯೋಗ ಕೇಂದ್ರದಲ್ಲಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಸನ್ ಶೈನ್ ಲೀಜನ್ ವತಿಯಿಂದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಧ್ಯಯನ ಪದವಿಪೂರ್ವ ಕಾಲೇಜು, ಜನನಿ ಫೌಂಡೇಷನ್, ಕ್ರೀಡಾ ಪರಿಷತ್ ಮತ್ತು ಯೋಗ ಸಂಸ್ಥೆಯ ಯುವ ಘಟಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸನ್ ಶೈನ್ ಲೀಜನ್ ಅಧ್ಯಕ್ಷೆ ಭಾನುಮತಿ ಮಾತನಾಡಿ, ‘ಇಂದಿನ ಯುವ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಕೊಳ್ಳುತ್ತಿದ್ದು, ಉಪಯೋಗಕ್ಕಿಂತ ತೊಂದರೆ ಆಗುತ್ತಿರುವುದೇ ಹೆಚ್ಚು. ಅವುಗಳಿಂದ ದೂರ ಇರಬೇಕು’ ಎಂದು ಸಲಹೆ ನೀಡಿದರು.
ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗದೇ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕ್ರೀಡಾ ಪರಿತ್ತಿನ ಕಾರ್ಯದರ್ಶಿ ನಿರಂಜನ್ ರಾಜ್, ‘ಯುವಕ– ಯುವತಿಯರು ವ್ಯಾಯಾಮ, ಆರೋಗ್ಯ, ಶಿಕ್ಷಣಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕು’ ಎಂದರು.
ಪತ್ರಕರ್ತ ವೆಂಕಟೇಶ್ ಅವರನ್ನು ಯುವ ಘಟಕದಗಳ ಸದಸ್ಯರು ಸನ್ಮಾನಿಸಿದರು. ನಾಗೇಶ್ ಪ್ರಸಾದ್, ಸನ್ ಶೈನ್ ಲೀಜನ್ ಕಾರ್ಯದರ್ಶಿ ಭಾಗ್ಯಾ, ಖಜಾಂಚಿ ಶ್ವೇತಾ, ಜನನಿ ಫೌಂಡೇಷನ್, ಸನ್ ಶೈನ್ ಲೀಜನ್ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.