ADVERTISEMENT

ನೀರು ಪೂರೈಕೆಯಲ್ಲಿ ಅವ್ಯವಸ್ಥೆ: ನಾಗರಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 5:05 IST
Last Updated 24 ಸೆಪ್ಟೆಂಬರ್ 2011, 5:05 IST

ಶಿಗ್ಗಾವಿ: ಪಟ್ಟಣದ ರಾಜೀವ ನಗಕ್ಕೆ ಸುಮಾರು 5-6 ತಿಂಗಳಿಂದ ಸರಿಯಾಗಿ ನೀರು ಪೂರೈಕೆಯಾಗು ತ್ತಿಲ್ಲ ಎಂದು ಆಗ್ರಹಿಸಿ ಇಲ್ಲಿನ ಸಾರ್ವಜನಿಕರು ಪಟ್ಟಣಕ್ಕೆ ನಾಗನೂರ ಕೆರೆಯಿಂದ ನೀರು ಸರಬುರಾಜು ಮಾಡುವ ವಾಲ್ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ರಾಜೀವ ನಗರಕ್ಕೆ ನೀರು ಪೂರೈಕೆ ಮಾಡುವಲ್ಲಿ ಪುರಸಭೆ ಸಿಬ್ಬಂದಿ ನಿರ್ಲಕ್ಷತೆ ತೂರುತ್ತಿದ್ದು, ಸುಮಾರು ತಿಂಗಳಿಂದ ನೀರು ಪೂರೈಕ್ಕೆಯ ಅವ್ಯವಸ್ಥೆ ಸರಿಪಡಿಸಬೇಕು ಎಂದು. ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೂ ಸಹ ಈ ವರೆಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಅದರಿಂದ ಮಕ್ಕಳು, ಮಹಿಳೆಯರು ದೂರದಿಂದ ನೀರು ತರುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಬೆಳಿಗ್ಗೆಯಿಂದ ಪ್ರಾರಂಭವಾದ ಪ್ರತಿಭಟನಾಕಾರರಲ್ಲಿನ ಫಾತಿಮಾ ಸವಣೂರ, ಗಂಗಮ್ಮಾ ಲಮಾಣಿ ಹಾಗೂ ನದಾಫ್ ಎಂಬ ಮಹಿಳೆಯರು ತೀರಾ ಅಸ್ಥವ್ಯಸ್ಥರಾಗಿ ಪ್ರಜ್ಞಾಹಿನರಾಗಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಪುರಸಭೆ ಮುಖ್ಯಾಧಿಕಾರಿ ಪಾಟೀಲ, ಪುರಸಭೆ ಅಧ್ಯಕ್ಷೆ ಇಂದ್ರಮ್ಮಾ ಹಾವೇರಿ ಸೇರಿದಂತೆ ಕೆಲವು ಸದಸ್ಯರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರಾಜೀವ ನಗರಕ್ಕೆ ಇನ್ನು ಮುಂದೆ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ಸಿಬ್ಬಂದಿಗೆ ಈಗಾಗಲೆ ಸೂಚಿಸಲಾಗಿದೆ. ನಾಳೆಯಿಂದ ನೀರು ಪೂರೈಕ್ಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವದಾಗಿ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.

ಪುರಸಭೆ ಸದಸ್ಯ ಪರಶುರಾಮ ಸೂನ್ನದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ವೀರಣ್ಣ ಹವಳಪ್ಪನವರ, ಮಲ್ಲಿಕಾರ್ಜುನ ಕಾಳೆ, ಮುತ್ತುಬಾಯಿ, ದುರ್ಗಪ್ಪ ವಡ್ಡರ, ಮೌಲಾಸಾಬ ಅರಟಾಳ, ಲಲಿತವ್ವ ಹೆಸರೂರ,    ರಜೀಯಾ ಬೇಗಂ ಖತೀಬ, ಫಾತೀಮಾ ಸವಣೂರ ಸೇರಿದಂತೆ ನೂರಾರು ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಾನೂನು ಅರಿವು-ನೆರವು ಕಾರ್ಯಕ್ರಮ ಇಂದು
ಹಾವೇರಿ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಯೋಗದಲ್ಲಿ ಇದೇ 24ರಂದು ಬೆಳಿಗ್ಗೆ10 ಘಂಟೆಗೆ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಹಾಗೂ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು-ಅರಿವು ನೆರವು ಕಾರ್ಯಕ್ರಮ ಏರ್ಪಡಿಸಿದೆ.

ಜಿಲ್ಲಾ ಸೇಷನ್ಸ್ ನ್ಯಾಯಾಧೀಶ ಕೆ.ಸಿ.ರಾಮಕೃಷ್ಣಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಾಚಾರ್ಯ ಶಿವಾನಂದ ತೆಪ್ಪದ ಅಧ್ಯಕ್ಷತೆ ವಹಿಸ ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.