
ಪ್ರಜಾವಾಣಿ ವಾರ್ತೆಸವಣೂರ (ಹಾವೇರಿ ಜಿಲ್ಲೆ): ಮೋಟರ್‌ಬೈಕ್ ಮರಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದು, ಕಳಲಕೊಂಡ ಗ್ರಾಮದ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಚಿಲ್ಲೂರ ಬಳಿ ಭಾನುವಾರ ನಡೆದಿದೆ.
ಬೈಕ್ ಚಾಲಕ ಪರಮೇಶ ಮಹದೇವಪ್ಪ ಮತ್ತೂರ (24), ರಮೇಶ ಬಸನಗೌಡ ಹೊಸಮನಿ (26)ಮೃತಪಟ್ಟಿದ್ದಾರೆ. ಸಹ ಪ್ರಯಾಣಿಕ ಫಕ್ಕೀರೇಶ ಶಂಕ್ರಪ್ಪ ತಡಸದ ಗಾಯಗೊಂಡಿದ್ದಾರೆ. ಕಾರಡಗಿಯಲ್ಲಿನ ಮದುವೆಯಲ್ಲಿ ಪಾಲ್ಗೊಂಡು ಮರಳಿ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.