ADVERTISEMENT

ರಸ್ತೆ ಅವ್ಯವಸ್ಥೆ: ಸಾರ್ವಜನಿಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 10:40 IST
Last Updated 10 ಸೆಪ್ಟೆಂಬರ್ 2011, 10:40 IST

ಸವಣೂರ: ನಗರದ ಶುಕ್ರವಾರ ಪೇಟೆಯ ರಸ್ತೆ ದುರವಸ್ಥೆಯ ಬಗ್ಗೆ ಸಾರ್ವಜನಿಕರ ಆಕ್ರೋಶ ಪುನರಾ ವರ್ತನೆಗೊಂಡಿದೆ. ರಸ್ತೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸಿ.ಡಿ ಕುಸಿದು ಹಲ ವಾರು ತಿಂಗಳು ಗತಿಸಿದರೂ, ಅದನ್ನು ದುರಸ್ತಿ ಮಾಡದ ಪುರ ಸಭೆಯ ನಿರ್ಲಕ್ಷದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಶುಕ್ರವಾರ ಪೇಟೆಯ ರಸ್ತೆ ಕೆಸರು ಗದ್ದೆಯಂತಾಗಿದೆ. ಇಲ್ಲಿ ಮಾಡಲಾಗಿ ರುವ ಪೈಪ್‌ಲೈನ್ ಬದಲಾವಣೆ ಕಾಮ ಗಾರಿಯ ಮಣ್ಣು ರಸ್ತೆಯನ್ನು ಆಕ್ರಮಿಸಿಕೊಂಡಿದೆ. ರಸ್ತೆಯ ಉದ್ದಕ್ಕೂ ನೂರಾರು ಸಣ್ಣ ಪುಟ್ಟ ಗುಂಡಿಗಳು ಬಾಯಿ ತೆರೆದುಕೊಂಡಿದೆ. ಮಳೆನೀರು ತುಂಬಿಕೊಂಡು ಅತ್ಯಂತ ಅಪಾಯಕಾರಿ ಸ್ವರೂಪ ಪಡೆದುಕೊಂಡಿದೆ ಎಂಬ ಆಕ್ಷೇಪಣೆಗಳು ಸಾರ್ವಜನಿಕರಿಂದ ವ್ಯಕ್ತವಾಗಿದೆ.

ಇದಕ್ಕೆ ಪೂರಕವಾಗಿ ಶುಕ್ರವಾರ ಪೇಟೆ ಅಗಸಿ ಬಾಗಿಲಿನ ಸಿ.ಡಿ ಕುಸಿದು ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಸಿಡಿಯ ಜಾಗದಲ್ಲಿ ಗುಂಡಿ ಉಳಿದು ಕೊಂಡಿದೆ.

ಸ್ಥಳೀಯ ಯುವಕರು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಅಲ್ಲಿ ಮಣ್ಣು ಸುರಿದ ಪುರಸಭೆ, ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಒಂದು ಕಡೆ ಗುಂಡಿ, ಇನ್ನೊಂದೆಡೆ ಕೆಸರಿನ ಹೊಂಡದ ನಡುವೆಯೇ ಸಂಚಾರಕ್ಕೆ ಕಸರತ್ತು ಮಾಡಬೇಕಾಗಿದೆ. ಸಂಪೂರ್ಣ ಸಿಡಿಯನ್ನು ಮರು ನಿರ್ಮಾಣ ಮಾಡದೆ ತಾತ್ಕಾಲಿಕ ಕ್ರಮಕ್ಕೆ ಮುಂದಾದ ಪುರಸಭೆಯ ಕಾರ್ಯವೈಖರಿಯ ಬಗ್ಗೆ ಸವಣೂರಿನ ಆಟೋ ಚಾಲಕರ ಸಂಘ ತೀವೃ ಆಕ್ರೋಶ ವ್ಯಕ್ತಪಡಿಸಿದೆ.

ಲಘು ವಾಹನಗಳ ಸಂಚಾರಕ್ಕೂ ಅಯೋಗ್ಯವಾಗಿರುವ ಶುಕ್ರವಾರ ಪೇಟೆಯ ಸಿ.ಡಿ ಹಾಗೂ ರಸ್ತೆಯನ್ನು ಸುಧಾರಿಸಬೇಕು ಎಂದು ಸಂಘದ ಪದಾಧಿಕಾರಿಗಳಾದ ಅಬ್ದುಲ ರೆಹೆಮಾನ, ಮಹ್ಮದ ಆಸೀಫ್ ಗವಾರಿ, ಮಕ್ಬುಲ್, ವಿಜಯ, ಶಿವಾನಂದ, ನಾಮದೇವ, ಅಷ್ಪಾಕ್, ತೌಸೀಫ್, ದಾದಾಪೀರ, ಅಸ್ಲಮ್, ಅಮರ, ಪರಮೇಶ, ಕೊಯ್ತೆವಾಲೆ, ಇನಾ ಯತ್, ರಶೀದ್, ರಾಜು, ಹನುಮಂತ, ಇಸಾಕ್ ಮುಂತಾದವರು ಆಗ್ರಹಿ ಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.